ಜಿಲ್ಲೆ

ಸಾವಯವ ಗೊಬ್ಬರದಿಂದ ರೋಗ ನಿರೋಧಕ ಶಕ್ತಿ: ಎಚ್​. ದಾನೆಗೊಂಡರ್​ ಮಾಹಿತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದ.ಕ ಜಿಲ್ಲಾಮಟ್ಟದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಾಗಾರ ಸೋಮವಾರ ನಡೆಯಿತು. ಪುತ್ತೂರು ಉಪಕೃಷಿ ನಿರ್ದೇಶಕ ಶಿವಶಂಕರ್​ ಎಚ್​. ದಾನೆಗೊಂಡರ್​ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ರೈತರು ಸಾವಯವ ಗೊಬ್ಬರದಿಂದ ಕೃಷಿ ಮಾಡುತ್ತಿದ್ದ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚಿತ್ತು. ಇಂದು ಹಲವಾರು ಹೊಸ ತಳಿಗಳು ಅಭಿವೃದ್ಧಿಗೊಳ್ಳುತ್ತಿವೆ. ಹಳೇ ತಳಿಗಳ ಜತೆ ಇವುಗಳನ್ನು ಸಂರಸುವ ಅಗತ್ಯವಿದೆ ಹಾಗೂ ಆಯಾಯ ಸ್ಥಳಗಳಿಗೆ ಹೊಂದಾಣಿಕೆಯಾಗಬಲ್ಲ ತಳಿಗಳನ್ನು ನಾಟಿ ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ ಎಂದರು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಹಿರಿಯ ವಿಜ್ಞಾನಿ ಡಾ.ಟಿ.ಜೆ. ರಮೇಶ್​ ಉಪಸ್ಥಿತರಿದ್ದರು. ದೇಸಿ ತಳಿಗಳ ಸಂರಕ್ಷಣೆ ಮತ್ತು ಅಗತ್ಯದ ಕುರಿತು ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್​., ಸುರ್ಯದ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಭತ್ತದ ತಳಿ ಸಂರಕ್ಷಣೆ, ಅಗತ್ಯ ವಿಧಾನ ಕುರಿತು ಹಾಗೂ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ಪುರಸತ ತಳಿ ತಪಸ್ವಿ ಬಿ. ಕೆ. ದೇವರಾವ್​ ಭತ್ತದ ತಳಿ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಎ.ಡಿ. ಸ್ವಾಗತಿಸಿದರು.ಬೆಳ್ತಂಗಡಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಕೃಷಿ ನಿರ್ದೇಶಕ ಗಣೇಶ್​ ವಂದಿಸಿದರು.