ವಾರಂಬಳ್ಳಿ ಗ್ರಾಪಂ ಸಭಾಂಗಣದಲ್ಲಿ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮ ನಡೆಯಿತು  
ಜಿಲ್ಲೆ

ಡಿಜಿಟಲ್ ಸಾಕ್ಷರತೆ ಅತ್ಯಗತ್ಯ

ಇಂದಿರಾ ಎನ್ ಕೆ

ಬ್ರಹ್ಮಾವರ: ಅಕ್ಷರ ಕಲಿತವರಿಗೆ ಕೂಡಾ ಇಂದಿನ ದಿನದಲ್ಲಿ ಡಿಜಿಟಲ್ ಸಾಕ್ಷರತೆ ಶಿಕ್ಷಣ ಅಗತ್ಯವಾಗಿದೆ ಎಂದು ಉಡುಪಿ ಜಿಪಂ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ ಹೇಳಿದರು.

ಉಡುಪಿ ಜಿಪಂ, ಬ್ರಹ್ಮಾವರ ತಾಪಂ, ವಾರಂಬಳ್ಳಿ ಗ್ರಾಪಂ, ಡೆಲ್ ಮತ್ತು ಶಿಕ್ಷಣ ಫೌಂಡೇಶನ್, ಓಂಕಾರ ಸಂಜೀವಿನಿ ಒಕ್ಕೂಟ ವತಿಯಿಂದ ಗುರುವಾರ ವಾರಂಬಳ್ಳಿ ಗ್ರಾಪಂ ಸಭಾಂಗಣದಲ್ಲಿ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾರಂಬಳ್ಳಿ ಗ್ರಾಪಂ ನಿತ್ಯಾನಂದ ಬಿ.ಆರ್, ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ತಾಪಂ ಸಹಾಯಕ ನಿರ್ದೇಶಕ ಮಹೇಶ್, ಹೆಗ್ಗುಂಜೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಶೆಟ್ಟಿ, ಓಂಕಾರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಹೇಮಾ ಜಗನ್ನಾಥ ಪೂಜಾರಿ, ಸ್ವಾತಿ, ವಾರಂಬಳ್ಳಿ ಗ್ರಾಪಂ ಉಪಾಧ್ಯಕ್ಷೆ ಉಮಾಬಾಯಿ ಉಪಸ್ಥಿತರಿದ್ದರು. ಶಿಕ್ಷಣ ಫೌಂಡೇಶನ್ ರೀನಾ ಎಸ್.ಹೆಗ್ಡೆ ಅವರಿಂದ ತರಬೇತಿ ನಡೆಯಿತು. ವಾರಂಬಳ್ಳಿ ಗ್ರಾಪಂ ಕಾರ್ಯದರ್ಶಿ ಶೇಖರ ನಾಯ್ಕ ನಿರೂಪಿಸಿದರು.