ಸುಬ್ರಹ್ಮಣ್ಯ: ಇಲ್ಲಿನ ರೋಟರಿ ಕ್ಲಬ್‌ಗೆ ಶನಿವಾರ ರೋಟರಿ ಜಿಲ್ಲೆ 3181ರ ಡೈಮಂಡ್ ಪ್ಲಸ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಕ್ಲಬ್ ಕೈಗೊಂಡ ಸಮುದಾಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ ತರಬೇತಿ, ದೇಣಿಗೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಅವರಿಂದ ಕುಕ್ಕೆ ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಸ್ವೀಕರಿಸಿದರು. ಕ್ಲಬ್‌ಗೆ ಡೈಮಂಡ್ ಪ್ಲಸ್ ಅವಾರ್ಡ್ ಜತೆಗೆ ಸಿಗ್ನಿಫಿಕೆಂಟ್ ಅವಾರ್ಡ್ ಹಾಗೂ ಎಂಗೇಜ್ಮೆಂಟ್ ಅವಾರ್ಡ್ ಲಭಿಸಿದೆ.
ಕಾರ್ಯದರ್ಶಿ ಚಿದಾನಂದ ಕುಳ, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್, ಪೂರ್ವಾಧ್ಯಕ್ಷರಾದ ಶಿವರಾಮ ಯೇನೆಕಲ್, ರಾಮಕೃಷ್ಣ ಮಲ್ಲಾರ, ಗಿರಿಧರ ಸ್ಕಂದ, ಲೋಕೇಶ್ ಬಿ.ಎನ್, ವೆಂಕಟೇಶ್ ಎಚ್.ಎಲ್, ಗೋಪಾಲ ಎಣ್ಣೆಮಜಲ್, ಸೀತಾರಾಂ ಎಣ್ಣೆ ಮಜಲ್, ಮಾಯಿಲಪ್ಪ ಸಂಕೇಶ, ಭರತ್ ನೆಕ್ರಾಜೆ, ವಿಜಯಕುಮಾರ ಅಮೈ, ಪ್ರಶಾಂತ್ ಕೋಡಿಬೈಲು ಉಪಸ್ಥಿತರಿದ್ದರು.