ಜಿಲ್ಲೆ

ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ ಧರ್ಮಸ್ಥಳ ಯೋಜನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ದೇವರ ಸಂಪತ್ತನ್ನು ಜನರ ಒಳಿತಿಗಾಗಿ ಧರ್ಮಸ್ಥಳ ಕ್ಷೇತ್ರ ವಾಡಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ವಾಡಿದರೂ ಕ್ಷೇತ್ರದ ಕೀರ್ತಿ ಕಡಿಮೆಯಾಗುವುದಿಲ್ಲ. ಕೃಷಿಗೆ ಹೆಚ್ಚು ಒತ್ತು ನೀಡಿ ರೈತರನ್ನು ಮೇಲೆತ್ತಿದ ಕೀರ್ತಿ ಧರ್ಮಸ್ಥಳದ ಯೋಜನೆಗೆ ಇದೆ ಎಂದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೆಬ್ರಿ, ಯಂತ್ರಶ್ರೀಯ ಹದನ ಕಾರ್ಯಕ್ರಮವನ್ನು ಶಿವಪುರ ಪಾಂಡುಕಲ್ಲು ಶಂಕರ ಬಡ್ಕಿಲಾಯ ಮನೆ ಆವರಣದಲ್ಲಿ ಉದ್ಘಾಟಿಸಿ ವಾತನಾಡಿದರು.

ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮೆನೇಜಸ್ ವಾತನಾಡಿ, ಯಾಂತ್ರೀಕರಣದ ಮೂಲಕ ರೈತರು ಕಷಿ ವಾಡಿದಾಗ ಲಾಭ ಪಡೆಯಬಹುದು. ಇಂದು ಉಳುಮೆಯಿಂದ ಕಟಾವಿನ ತನಕ ಬೇಕಾದ ವ್ಯವಸ್ಥೆ ಯೋಜನೆ ವಾಡಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರಾದ ಗೋವಿಂದ ಕುಲಾಲ್, ಸಂಶೋಧಕ ರಾವೇಂದ್ರ ರಾವ್, ಯಂತ್ರಶ್ರೀ ಯೋಧರಾದ ಬೆಳ್ವೆ ಕೃಷ್ಣ ನಾಯ್ಕ, ವಾಸು ಕುಲಾಲ್, ರಮೇಶ್, ಶಂಕರ್ ಬಡ್ಕಿಲಾಯ ಅವರನ್ನು ಗೌರವಿಸಲಾಯಿತು.

ಯೋಜನಾಧಿಕಾರಿ ಲೀಲಾವತಿ, ಕೇಂದ್ರ ಕಚೇರಿಯ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಉದ್ಯಮಿ ಬಿ.ಹರೀಶ್ ಪೂಜಾರಿ, ಪ್ರಮುಖರಾದ ಶಂಕರ್ ಬಡ್ಕಿಲಾಯ, ಮೋಹನ್ ದಾಸ್ ನಾಯಕ್, ಜಗನ್ನಾಥ ಕುಲಾಲ್, ಸುರೇಶ್ ಶೆಟ್ಟಿ, ಪಟ್ಟಾಭಿ ರಾಮಚಂದ್ರ ಭಟ್, ರಮೇಶ್ ಪೂಜಾರಿ ಶಿವಪುರ, ಶೋಭಾ ಶೆಟ್ಟಿ, ಹರೀಶ್ ಶೆಟ್ಟಿ, ಮನೋಜ್‌ಕುವಾರ್ ಶೆಟ್ಟಿ, ವಸಂತಕುವಾರ ಶೆಟ್ಟಿ ಬೆಳ್ವೆ, ಶಂಕರ್ ಶೆಟ್ಟಿ ಬೆಳ್ವೆ, ರತ್ನಾಕರ ಪೂಜಾರಿ ವಾತಿಬೆಟ್ಟು, ಸುರೇಶ್ ಶೆಟ್ಟಿ ಆರ್ಡಿ, ರಾವೇಂದ್ರ ಭಟ್, ಯೋಗಾನಂದ ಪೂಜಾರಿ, ಹರೀಶ್ ನಾಯ್ಕ, ಸತೀಶ್ ನಾಯಕ್, ಚಂದ್ರನಾಯ್ಕ, ಪ್ರವೀಣ್ ಹೆಗ್ಡೆ, ನಾರಾಯಣ ನಾಯ್ಕ ಸಂತೆಕಟ್ಟೆ, ಸತೀಶ್ ನಾಯ್ಕ, ಮೇಲ್ವಿಚಾರಕಿ ರೇವತಿ, ಕೃಷಿ ಮೇಲ್ವಿಚಾರಕ ಉಮೇಶ್ ಬಿ.ಕೆ, ಸೇವಾ ಪ್ರತಿನಿಧಿಗಳು, ಒಕ್ಕೂಟ ಅಧ್ಯಕ್ಷರು, ಕೃಷಿಕರು ಹಾಜರಿದ್ದರು. ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಉಮೇಶ್ ನಿರೂಪಿಸಿ, ವಂದಿಸಿದರು.

ಸಾಂಪ್ರದಾಯಕ ತಿನಿಸುಗಳ ಪ್ರದರ್ಶನ

ಹುರುಳಿ ಚಟ್ನಿ, ತಿವ್ಮಾರೆ ಚಟ್ನಿ, ವಾವಿನಕಾಯಿ ಚಟ್ನಿ, ಉದ್ದಿನ ಚಟ್ನಿ, ಉಪ್ಪಿನ ಹುಡಿ, ನೀರಿಗೆ ಹಾಕಿದ ವಾವಿನಕಾಯಿ ಚಟ್ನಿ, ಹೆಬ್ಬೆಸಿನ ಚಟ್ನಿ, ಕಣಿಲೆ ಪಲ್ಯ, ಹಲಸಿನ ಸೊಳೆ ಪಲ್ಯ, ಗುಜ್ಜೆಪಲ್ಯ, ಪತ್ರೊಡೆ, ಶಾವಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಅದೃಷ್ಟ ರೈತ, ಚೆನ್ನೆಮಣೆ ಆಟ ಗಮನ ಸೆಳೆಯಿತು.