ಕೊಕ್ಕರ್ಣೆ: ನಮ್ಮಲ್ಲಿರುವ ದೇವ ಭಕ್ತಿ ದೇಶ ಭಕ್ತಿ ಆಗಬೇಕು. ಅಂದರೆ ಈಶ, ಗಣಪ, ಕೃಷ್ಣ ದೇವರುಗಳ ಭಕ್ತಿ ದೇಶ ಭಕ್ತಿಯಾಗಿ ಮೂಡಿಬರಬೇಕು ಎಂದು ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಸ್ಥಾಪಕ ಅಧ್ಯಕ್ಷ ಪ್ರಭಾಕರ ನಾಯಕ್ ಹೇಳಿದರು.
ಶಿರಿಯಾರ ಕಲ್ಮರ್ಗಿ ಸಾಬ್ರಕಟ್ಟೆ ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿದರು.
ಜೈ ಗಣೇಶ ಸೊಸೈಟಿಯ ಉದ್ಯಮಿ ಸ್ವಾತಿ ಗೋಪಾಲಕೃಷ್ಣ ನಾಯಕ್, ಪ್ರೀತಿ ನಾಯಕ್, ಸಾಬರಕಟ್ಟೆ ಶಾಖೆ ವ್ಯಾನೇಜರ್ ಯಶೋದಾ ಮಲ್ಯ, ಶಿರಿಯಾರ ಶಾಖಾಧಿಕಾರಿ ದಿನೇಶ್ ಭಟ್, ಸಿಬ್ಬಂದಿ ಚೈತ್ರಾ ವಿನಾಯಕ ಶೆಣೈ, ವ್ನಿೇಶ, ಸಂಪತ, ಪ್ರಖ್ಯಾತ್, ಶ್ರೀ ರಾವಾಂಜನೇಯ ಸೇವಾ ಟ್ರಸ್ಟ್‌ನ ಖಜಾಂಚಿ, ಉದ್ಯಮಿ ದಾಮೋದರ ನಾಯಕ್ ಕಲ್ಮರ್ಗಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶಾನುಭೋಗ್ ನಿರೂಪಿಸಿದರು.