ಜಿಲ್ಲೆ

ಅಭಿವೃದ್ಧಿ ದೃಷ್ಟಿಕೋನ ಉಪನ್ಯಾಸ

ಸೌಮ್ಯ ಆರ್

ಪೆರ್ಲ: ಪೆರ್ಲದ ನಳಂದ ಕಾಲೇಜು, ನಳಂದ ಚಾರಿಟೆಬಲ್ ಟ್ರಸ್ಟ್, ವಾಣಿಜ್ಯೋದ್ಯಮ ಅಭಿವೃದ್ಧಿ ಕ್ಲಬ್ ಆಶ್ರಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ದೃಷ್ಟಿಕೋನ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು.

ಪ್ರಾಂಶುಪಾಲ, ವಾಣಿಜ್ಯೋದ್ಯಮ ಅಭಿವೃದ್ಧಿ ಕ್ಲಬ್ ಪೋಷಕ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯಮಿ ಸಫಲನಾಗಲು ತನ್ನ ಕೌಶಲ ಬಲಪಡಿಸಬೇಕು. ದೇಶದ ಏಳಿಗೆಗೆ ಆಳಾಗಿ ದುಡಿಯುವ ಬದಲು ಹಲವು ಜನರಿಗೆ ಕೆಲಸ ನೀಡುವ ವ್ಯಕ್ತಿಯಾಗಬೇಕು. ಎಲ್ಲರಲ್ಲೂ ಈ ಮನೋಭಾವ ಬೆಳೆದಾಗ ದೇಶ ಅಭಿವೃದ್ಧಿ ಹೊಂದುವುದು ಎಂದರು.

ವಾಣಿಜ್ಯೋದ್ಯಮ ಅಭಿವೃದ್ಧಿ ಕ್ಲಬ್ ಸಂಯೋಜಕಿ ಭವ್ಯ ಬಿ. ಉದ್ಯಮಶೀಲತೆ ಪ್ರಾಮುಖ್ಯತೆ, ಮಹತ್ವದ ಕುರಿತು ತರಗತಿ ನೀಡಿದರು. ಸಂಯೋಜಕಿ ಭವ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಆದರ್ಶ್ ವಂದಿಸಿದರು. ಹರ್ಷಿತಾ ನಿರೂಪಿಸಿದರು.