ಚಿತ್ರಪಾಡಿ ಪಿ.ಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಮನವಿ ಪೋಸ್ಟರ್ ಹಾಗೂ ಲೋಗೋವನ್ನುಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಬಿಡುಗಡೆಗೊಳಿಸಿದರು 
ಜಿಲ್ಲೆ

ಪ್ರಗತಿಪಥದತ್ತ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆ

ಇಂದಿರಾ ಎನ್ ಕೆ

ಕೋಟ: ಶೈಕ್ಷಣಿಕ ಕ್ಷೇತ್ರದಲ್ಲಿ ಚಿತ್ರಪಾಡಿ ಶಾಲೆ ಬಹಳಷ್ಟು ಮುಂಚೂಣಿಯಲ್ಲಿದೆ. ಇದರ ಶತ ಸಂವತ್ಸರ ಕಳೆದು ಪ್ರಗತಿಪಥದತ್ತ ಮುನ್ನುಗ್ಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಹೇಳಿದರು.
ಸಾಲಿಗ್ರಾಮ ದೇಗುಲದಲ್ಲಿ ಸಾಲಿಗ್ರಾಮ ಚಿತ್ರಪಾಡಿ ಪಿ.ಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಅಂಗವಾಗಿ ಪೋಸ್ಟರ್ ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಲೋಗೋ ಬಿಡುಗಡೆಗೊಳಿಸಿದರು. ದೇಗುಲ ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ್ ದೇವಾಡಿಗ, ಅಕ್ಷರರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ, ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ, ಕೋಶಾಧಿಕಾರಿ ಕೃಷ್ಣಮೂರ್ತಿ ಮರಕಾಲ, ಶಾಲಾಭಿವೃದ್ಧಿ ಸದಸ್ಯರಾದ ಹರೀಶ್, ಕೃಷ್ಣ ಆಚಾರ್, ಗಿರೀಶ್ ಕುಂದರ್, ಮಾಜಿ ಅಧ್ಯಕ್ಷ ರಾಘವೇಂದ್ರ ಆಚಾರ್, ಶಿಕ್ಷಕರಾದ ಪಾರ್ವತಿ ಶೆಟ್ಟಿ, ಸುಮತಿ ಮತ್ತಿತರರು ಉಪಸ್ಥಿತರಿದ್ದರು.