ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಿರ್ಮಿಸಿದ ಪ್ರಸಾದ ತಯಾರಿಕಾ ಕಟ್ಟಡದ ಕೆಳಗಿನ ಅಂತಸ್ತಿನ ಕ್ಷಿಪ್ರಪ್ರಸಾದ ಕಚೇರಿಯನ್ನು ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ಶ್ರೀಗಳು ಉದ್ಘಾಟಿಸಿದರು.  
ಜಿಲ್ಲೆ

ಭಕ್ತರ ಅನುಕೂಲಕ್ಕೆ ದೇವಳದಲ್ಲಿ ಅಭಿವೃದ್ಧಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ಕಟ್ಟಡದ ಕಾಮಗಾರಿ ಸೂಕ್ಷ್ಮವಾಗಿ ನಿರ್ಮಿಸಲ್ಪಟ್ಟಿದ್ದು, ಭಕ್ತರ ಅನುಕೂಲಕ್ಕಾಗಿ ದೇವಳದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮುಂದುವರೆಸಿಕೊಂಡು ಹೋಗಬೇಕು ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳು ಹೇಳಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪ್ರಸಾದ ತಯಾರಿಕಾ ಕಟ್ಟಡದ ಕೆಳಗಿನ ಅಂತಸ್ತಿನ ಕ್ಷಿಪ್ರಪ್ರಸಾದದ ಕಚೇರಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಟ್ಟಡ ನಿರ್ಮಾಣಕ್ಕೆ ನೆರವಾದ ತಾಂತ್ರಿಕರು ಹಾಗೂ ದಾನಿಗಳಿಗೆ ದೇವಳದ ವತಿಯಿಂದ ಸನ್ಮಾನಿಸಲಾಯಿತು. ಆನೆಗುಡ್ಡೆ ದೇಗುಲದ ಅನುವಂಶಿಕ ಉಪಾಧ್ಯಾಯ ಕುಟುಂಬಸ್ಥರು, ಪರ್ಯಾಯ ಅರ್ಚಕರು, ಅರ್ಚಕ ಮಂಡಳಿ ಮತ್ತಿತರರು ಇದ್ದರು.

ಧಾರ್ಮಿಕ ಕಾರ್ಯಕ್ರಮ

ಆನೆಗುಡ್ಡೆಯಲ್ಲಿ ಬ್ರಹ್ಮ ಕಲಶದ ವರ್ಧಂತಿ ಪ್ರಯುಕ್ತ ಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹೋಮ, 108 ರಜತ ಕಲಶಾಭಿಷೇಕ ಹಾಗೂ ಸ್ವರ್ಣ ಕಲಶದ ಅಭಿಷೇಕ ನಡೆಯಿತು.