ಜಿಲ್ಲೆ

ದೇವರಾಜು ಅರಸು ಟ್ರಕ್​ ಟರ್ಮಿನಲ್​ ಎಂಡಿ ಎಸ್​.ಶಂಕರಪ್ಪ ಅಮಾನತು

ಬೆಂಗಳೂರು: ದೇವರಾಜು ಅರಸು ಟ್ರಕ್​ ಟರ್ಮಿನಲ್​ ನಡೆದಿರುವ 47.10 ಕೋಟಿ ರೂ.ಹಗರಣ ಸಂಬಂಧ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಸ್​. ಶಂಕರಪ್ಪ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದ ಇವರು, ದೇವರಾಜು ಅರಸು ಟ್ರಕ್​ ಟರ್ಮಿನಲ್​ ಎಂಡಿ ಹುದ್ದೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ಅಕ್ರಮ ಎಸಗಿದ್ದ ಬಗ್ಗೆ ಶಂಕರಪ್ಪ ವಿರುದ್ಧ ಸಿಐಡಿ ಅಧಿಕಾರಿಗಳು ಕೇಸ್​ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗ್ರೂಪ್​ "ಎ' ಹಿರಿಯ ಶ್ರೇಣಿಯ ಅಧಿಕಾರಿಯಾಗಿದ್ದು, ಸರ್ಕಾರವು ಸಕ್ಷಮ ಪ್ರಾಧಿಕಾರವಾಗಿರುವ ಕಾರಣ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ಅನ್ವಯ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಹೀಗಾಗಿ, ಅಮಾನತುಗೊಳಿಸಲಾಗಿದೆ ಎಂದು ಕನ್ನಡ, ಸಂಸತಿ ಮತ್ತು ವಾರ್ತಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖವಾಗಿದೆ.