ದೇವದುರ್ಗ: ಮನೆಯ ಜವಾಬ್ದಾರಿ ಹೊರುವ ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೇ ಎಲ್ಲ ರೀತಿಯಿಂದ ಸದೃಢವಾಗಿರುತ್ತದೆ. ಹೀಗಾಗಿ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಅಭಿಯಾನ ಅ.2ರವರೆಗೆ ನಡೆಯಲಿದೆ. ಅಭಿಯಾನದ ಉದ್ದೇಶ ಮಹಿಳೆಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು.
ಇದನ್ನೂ ಓದಿ: ಈ 3 ರಾಶಿಯ ಮಹಿಳೆಯರು ತುಂಬಾ ಮುಗ್ಧರು, ಸುಲಭವಾಗಿ ಮೋಸ ಹೋಗ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac signs
ಹೀಗಾಗಿ ಎಲ್ಲ ಮಹಿಳೆಯರು ವೈದ್ಯಕೀಯ ಪರೀಕ್ಷೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವುದು ಅಗತ್ಯವಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ರಕ್ತಹೀನತೆ, ಕ್ಷಯರೋಗದಂಥ ಕಾಯಿಲೆಗಳ ತಪಾಸಣೆ ಮಾಡಿಸಬೇಕು. ಗರ್ಭಿಣಿಯರಿಗೆ ಪ್ರಸವಪೂರ್ವ ಹಾಗೂ ಪ್ರಸವ ನಂತರದ ತಪಾಸಣೆಗಳು, ಮಕ್ಕಳಿಗೆ ಲಸಿಕ ಸೌಲಭ್ಯಗಳು ಇವೆಲ್ಲವೂ ಅಭಿಯಾನದಲ್ಲಿ ದೊರೆಯಲಿವೆ. ಮಹಿಳೆಯರು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ, ವೈದ್ಯಾಧಿಕಾರಿಗಳಾದ ಶಿಲ್ಪಾ, ಶ್ರುತಿ, ನಿರ್ಮಲಾದೇವಿ, ಸಂಗಮ್ಮ, ಅಪ್ಸನಾ, ಶಿವಾನಂದ, ಆನಂದ, ಶಿವಕುಮಾರ್, ನಾಗರಾಜ್ ಡಾ.ಗಂಗಾಧರ್, ಆಯಿಷಾ, ತ್ಯಾಗರಾಜ, ಪ್ರಮುಖರಾದ ರಾಜು, ಶಿವಪ್ಪ, ತಿಮ್ಮಪ್ಪ, ಗೀತಮ್ಮ, ಚನ್ನಬಸಯ್ಯ, ಸೋಮಪ್ಪ, ಚಂದ್ರಮಪ್ಪ, ವೆಂಕಟೇಶ್, ಶ್ರೀನಿವಾಸ್, ರಂಗಮ್ಮ, ಅಂಬಿಕಾ, ಉಮಾ, ಶಿವು ಇದ್ದರು.