ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವಾನವನಿಗಿಂತ ಮೊದಲೇ ಹುಟ್ಟಿದ ಪರಿಸರವನ್ನು ನಮ್ಮ ಸ್ವಾರ್ಥಕ್ಕಾಗಿ ನಾಶ ವಾಡುತ್ತಿದ್ದೇವೆ. ಮನುಷ್ಯ ಸಸಿಯಾಗಿ ಬದುಕಲು ಕಲಿಯಬೇಕು. ಬೆಳೆಸಿ ಉಳಿಸಿ ಬಳಸುವ ಜನಗಳು ನಾವಾಗಿದ್ದೇವೆ. ಆದರೆ ಇಂದಿನ ಜನಾಂಗ ಕೇವಲ ಬೆಳೆಸುವವರಾಗಿದ್ದಾರೆ. ಉಳಿಸುವ ಕಡೆ ಗಮನ ಹರಿಸುತ್ತಿಲ್ಲ. ಸಸಿ ನೆಟ್ಟು ಪೋಷಿಸುವ ಕೆಲಸವಾಗಬೇಕು ಎಂದು ಮೂಡುಬಿದಿರೆ ಎಸಿಎ್ಒ ಪಿ. ಶ್ರೀಧರ್ ಸಲಹೆ ನೀಡಿದರು.
ಬೆಳಪು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಪಂ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಸಸಿ ವಿತರಣೆ, ಸಾವಯವ ಕೃಷಿಕರಿಗೆ ಹಾಗೂ ವಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಾತನಾಡಿದರು.
ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಾತನಾಡಿ, ಪರಿಸರ ಉಳಿಸಿ ಬೆಳೆಸಿದರೆ ಕೃತಕ ಜಲ ಸಂರಕ್ಷಣೆ ಅಗತ್ಯವಿಲ್ಲ. ಹುಟ್ಟು ಸಾವಿನವರೆಗೆ ಮಕ್ಕಳನ್ನು ಬೆಳೆಸಿದಂತೆ ಗಿಡಗಳ ಆರೈಕೆ ವಾಡುವ ಸಂಕಲ್ಪ ನಮ್ಮದಾಗಬೇಕು ಎಂದರು.
ನಿವೃತ್ತ ಸೈನಿಕ ಗೋಪಾಲ ಪೂಜಾರಿ, ಅನಂತರಾಮ ರಾವ್, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ, ಸಾವಯವ ಕೃಷಿಕರಾದ ಜಗನ್ನಾಥ ಪೂಜಾರಿ, ಗಣೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಳೆಯಿಂದ ಹಾನಿಗೊಳಗಾದ ಮನೆಯವರಿಗೆ ಸಹಾಯಧನ ವಿತರಿಸಲಾಯಿತು.
ತಾಪಂ ಇಒ ಜೇಮ್ಸ್ ಡಿಸಿಲ್ವ, ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ್, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಅಧ್ಯಕ್ಷ ಹರೀಶ್ ಹೆಜವಾಡಿ, ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಹನವಾಜ್, ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ತಾಪಂ ವಾಜಿ ಉಪಾಧ್ಯಕ್ಷ ಯು.ಸಿ ಶೇಖಬ್ಬ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.