ಗುರುಪುರ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಗುರುಪುರ ವಲಯದ ನೇತೃತ್ವದಲ್ಲಿ ಗುರುಪುರ ಹೋಬಳಿ ಉಪ ತಹಸೀಲ್ದಾರ್ ಸ್ಟೀಫನ್ ಅವರ ಮೂಲಕ ಮಂಗಳೂರು ತಹಸೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮಂಗಳೂರು ತಾಲೂಕಿನಲ್ಲಿ ಅಧಿಕೃತ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡದೆ ಇರುವುದರಿಂದ ಕಟ್ಟಡ ಮತ್ತು ನಿರ್ಮಾಣ ಕಾಮಗಾರಿಯಲ್ಲಿ ದುಡಿಯುವ ಕಾರ್ಮಿಕರು ಉದ್ಯೋಗವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಬಡವರ ಮನೆ ನಿರ್ಮಾಣಕ್ಕೂ ಕುತ್ತು ಬಂದಿದ್ದು, ಸರ್ಕಾರ ಶೀಘ್ರ ಆಯಾಯ ಗ್ರಾಪಂ ವ್ಯಾಪ್ತಿಯಲ್ಲಿ, ಸ್ಥಳೀಯ ಆಡಳಿತದಿಂದ ಸಂಪ್ರದಾಯಿಕ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿ, ಕಡಿಮೆ ದರದಲ್ಲಿ ಸುಲಭವಾಗಿ ಮರಳು ಮತ್ತು ಕೆಂಪು ಕಲ್ಲು ಪೂರೈಕೆಯಾಗುವಂತೆ ಕರಾವಳಿ ಮರಳು ನೀತಿಯನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಮನವಿ ಮಾಡಲಾಯಿತು.
ದಿನೇಶ ಇರುವೈಲು, ವಸಂತಿ ಕಂಪ್ಪೆಪದವು, ವೆಂಕಪ್ಪ ಸಾಲ್ಯಾನ್, ನೋಣಯ್ಯ ಗೌಡ, ಜಯಶೀಲ ವಾಮಂಜೂರು, ಅಶೋಕ ಬಂಗೇರ ವಾಮಂಜೂರು, ಯಶೋದಾ ಮಳಲಿ, ಜನಾರ್ದನ ಗೌಡ ಎಡಪದವು, ರೋಹಿತಾಶ್ವ ಮಿಜಾರು, ಪುತ್ತು ಗೌಡ ಮಿಜಾರು, ಜನಾರ್ದನ ಮಳಲಿ, ಕಾರ್ಮಿಕ ಮುಖಂಡ ಸದಾಶಿವದಾಸ್ ಇದ್ದರು.