ವಿಜಯಪುರದ ಜಿಲ್ಲಾಡಳಿತ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ಸುರೇಶ ಡಬ್ಬಿ, ಡಾ. ರಾಜು ಚವ್ಹಾಣ, ಡಾ. ರಮೇಶ ಕಡೆಮನೆ ಮತ್ತಿತರರಿದ್ದಾರೆ. 
ಜಿಲ್ಲೆ

ಸೇವೆ ಖಾಯಂ ಮಾಡಲು ಆಗ್ರಹ

ಗಿರೀಶ ಸಗರ

ವಿಜಯಪುರ: ಸೇವೆ ಖಾಯಂ ಮಾಡಲು ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸುರೇಶ ಡಬ್ಬಿ ಮಾತನಾಡಿ, ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಲು ಆಗ್ರಹಿಸಿ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ಈವರೆಗೂ ಗಮನ ಹರಿಸಿಲ್ಲ.

ಹೀಗಾಗಿ ನ. 23ರಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ತರಗತಿ ಬಹಿಷ್ಕರಿಸಲಾಗಿದೆ. ಹೀಗಾಗಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

ವಿಧಾನ ಮಂಡಲ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಡಾ. ರಾಜು ಚವ್ಹಾಣ, ಡಾ. ರಮೇಶ ಕಡೆಮನೆ, ಡಾ. ಆನಂದ ಕುಲಕರ್ಣಿ, ಡಾ. ರಮೇಶ ತೇಲಿ, ಡಾ. ಸುರೇಶ ಬಿರಾದಾರ, ಡಾ. ರಮೇಶ ನಾಗರೆಡ್ಡಿ, ಡಾ. ಶಖೀರಾಬಾನು ಕಿತ್ತೂರ, ಭಾರತಿ ಇನಾಮದಾರ, ಡಾ. ಭಾರತಿ ಹಿರೇಮಠ, ಡಾ. ಸುರೇಖಾ ಪಾಟೀಲ, ರೂಪಾ ಕಮದಾಳ, ಎ.ಎಂ. ರಾಠೋಡ, ಗೋಪಾಲ ಚಕ್ರಸಾಲಿ, ಶಿವಕುಮಾರ ಪಾತಾಳಿ, ಡಾ. ವಿಜಯಲಕ್ಷ್ಮಿ ಪಾಟೀಲ, ಉಮೇಶ ಹಿರೇಮಠ, ಆನಂದ ಹಿರೇಮಠ, ಎಂ.ಬಿ. ಪಾಟೀಲ, ಡಾ. ರೇಣುಕಾ ಹೆಬ್ಬಾಳ, ಸದಾಶಿವ ಚಲವಾದಿ, ಡಾ. ತೇಜಸ್ವಿನಿ ಕೊರೆಗೊಳ, ಎಸ್.ಎ. ಮುಜಾವರ, ಡಾ. ಎಸ್.ಎಸ್. ಅಂಗಡಿ, ಡಾ. ಸರಿತಾ ಹಿಪ್ಪರಗಿ, ಜಿ.ಕೆ. ಯೋಗೇಶ, ಎಂ. ವಿರೇಶ, ಎಸ್.ಎಂ. ಸಿಂಹಾಸನಮಠ, ಗುಜ್ಜು ರಾಠೋಡ, ದೀಪಶ್ರೀ ಥೊರತ, ಖುದ್ದುಸ ಪಾಟೀಲ ಮತ್ತಿತರರಿದ್ದರು.