ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜರುಗಿತು.
ಆರೋಗ್ಯ, ಜಿಲ್ಲಾ ರಕ್ಷಣಾ ಟಕ, ಶಿಶು ಅಭಿವೃದ್ಧಿ ಯೋಜನೆ, ಕಂದಾಯ ಕೃಷಿ ಮತ್ತು ಜಲಾನಯನ, ಕಾರ್ಮಿಕ ಇಲಾಖೆ, ಪಶುವೈದ್ಯಕೀಯ, ಜೆಜೆಎಂ ಸೇರಿದಂತೆ ನಾನಾ ಇಲಾಖೆಯಿಂದ ಗ್ರಾಮಸ್ಥರಿಗೆ ದೊರಕುವ ಸೌಲಭ್ಯ ಕುರಿತು ವಾಹಿತಿ ನೀಡಲಾಯಿತು.
ಗ್ರಾಮದಲ್ಲಿ 15 ಎಕರೆ ಸರ್ಕಾರಿ ಜಾಗ ಖಾಲಿ ಇದ್ದು 365 ಮಂದಿ ವಸತಿ ರಹಿತರು ವಸತಿಗಾಗಿ ಅರ್ಜಿ ಸಲ್ಲಿಸಿದ್ದು, ಗ್ರಾಮದಲ್ಲಿರುವ ಬಲಾಡ್ಯರು ಎಕರೆ ಗಟ್ಟಲೆ ಭೂಮಿಯನ್ನು ಮಂಜೂರು ವಾಡಿಸಿಕೊಂಡವರೇ ಸರ್ಕಾರಿ ಖಾಲಿ ಜಾಗವನ್ನು ಕೂಡಾ ತಮ್ಮದು ಎನ್ನುವತ್ತಿದ್ದಾರೆ. ವಸತಿ ರಹಿತರಿಗೆ ಜಾಗ ಮಂಜೂರು ವಾಡುವಂತೆ ಸಾವಾಜಿಕ ಕಾರ್ಯಕರ್ತ ವಿಜಯ, ಗ್ರಾಮ ಆಡಳಿತಾಧಿಕಾರಿಯ ಗಮನ ಸೆಳೆದರು.
ಮೆಸ್ಕಾಂ, ಅರಣ್ಯ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಗೈರಾಗಿದ್ದ ಕಾರಣ ಮುಂದಿನ ತಿಂಗಳು ಮತ್ತೆ ಗ್ರಾಮಸಭೆ ಕರೆಯಲು ನಿರ್ಧರಿಸಲಾಯಿತು.
ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಪ್ರಕಾಶ್ ಬಿ.ಬಿ., ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ವಿವಿಧ ಇಲಾಖೆಗಳ ಡಾ.ರೋಹಿಣಿ, ಮೀನಾಕ್ಷಿ, ನಯನಾವಿಶ್ವಾಸ ಬಂಗೇರಾ, ಸುರೇಶ್, ಮಲ್ಲಿಕಾ ಪ್ರಸಾದ್, ಸಿದ್ದೇಶ್, ಮಹ್ಮದ್ ಸಾಲಿಂ, ಆಕಾಶ್ ಶೆಟ್ಟಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.