ದೇಲಂಪಾಡಿ ಸನ್ನಿಧಿಯಲ್ಲಿ ನಡೆದ ಪಾದಪೂಜೆ, ಭಿಕ್ಷಾ ಸೇವೆಯ ಸಂದರ್ಭ ಎಡನೀರು ಶ್ರೀಗಳು ಆಶೀರ್ವಚನ ನೀಡಿದರು. 
ಜಿಲ್ಲೆ

ದೇಲಂಪಾಡಿ ದೇವಳದಲ್ಲಿ ಪಾದಪೂಜೆ

ಸೌಮ್ಯ ಆರ್

ಕುಂಬಳೆ: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಅಷ್ಟಮಂಗಲ ದೈವ ಚಿಂತನೆ ಪ್ರಕಾರ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು. ಬಲಿವಾಡು ಕೂಟ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆದಿದ್ದು, ಎಡನೀರು ಮಠಾಧೀಶ ಸಚ್ಚಿದಾನಂದ ಶ್ರೀಗಳು ಆಗಮಿಸಿದ್ದರು. ಶ್ರೀಗಳು ಪಾದಪೂಜೆ ನಡೆಯಿತು.

ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಮೋಕ್ತೇಸರ ಕೋಳಾರು ಸತೀಶ್ಚಂದ್ರ ಭಂಡಾರಿ, ದೇಲಂಪಾಡಿ ಕ್ಷೇತ್ರದ ಮೋಕ್ತೇಸರ ಹಾಗೂ ವಕೀಲ ಐ.ಸುಬ್ಬಯ್ಯ ರೈ ಮಾತನಾಡಿದರು. ಸೇವಾ ಸಮಿತಿ ಉಪಾಧ್ಯಕ್ಷ ಶಂಕರ ರೈ ಮಾಸ್ತರ್ ಸ್ವಾಗತಿಸಿದರು. ಕಾರ್ಯದರ್ಶಿ ಡಿ.ರಾಜೇಂದ್ರ ರೈ ವಂದಿಸಿದರು