ಬೆಳ್ತಂಗಡಿ: ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ಅವರಿಗೆ ಫ್ಲೋರಿಡಾ ಇಂಗ್ಲಿಷ್ ಶಾಲೆ ಫ್ಲೋರಿಡಾ ಪ್ರಿ -ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಯೂನಿವರ್ಸಿಟಿ ಕಾಲೇಜು ವತಿಯಿಂದ ನಡೆಯುವ 25ನೇ ವಷರ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಯೋತಿ ಅವಾರ್ಡ್ ನೀಡಿ ಗೌರವಿಸಲಾಯಿತು. ದೀಪಕ್ ಜಿ.ಬೆಳ್ತಂಗಡಿ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡಿ, ಸಕ್ರಿಯವಾಗಿ ಸಮಾಜದೊಂದಿಗೆ ಬೆರೆತು ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದಾರೆ.