ಜಿಲ್ಲೆ

ಕುಸಿದು ಬಿದ್ದಿದ್ದ ಯುವಕ ಮೃತ್ಯು

ಸೌಮ್ಯ ಆರ್

ಕಾಸರಗೋಡು:ಕುಸಿದು ಬಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕನ್ನೆಪ್ಪಾಡಿ ಬಳಿಯ ಓಣಿಯಡ್ಕ ನಿವಾಸಿ ದಿ. ಕೃಷ್ಣ ನಾಯ್ಕ-ತಿರುಮಲೇಶ್ವರೀ ದಂಪತಿ ಪುತ್ರ ರವಿ(42) ಮೃತಪಟ್ಟಿದ್ದಾರೆ. ಪೇಂಟಿಂಗ್ ಕಾರ್ಮಿಕರಾಗಿದ್ದ ರವಿ ಅವರು ನೀರ್ಚಾಲು ಪೇಟೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕುಂಬಳೆ ಸಹಕಾರಿ ಆಸ್ಪತ್ರೆ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.