ಜಿಲ್ಲೆ

ಅಂತ್ಯಕ್ರಿಯೆ ವೇಳೆ ನೀರು ಕುಡಿದ ಮೃತ ಶಿಕ್ಷಕ?

suchetana

ಧಾರವಾಡ: ಮೃತಪಟ್ಟಿರುವುದಾಗಿ ನಂಬಿ ಅಂತ್ಯಸಂಸ್ಕಾರ ಮಾಡುವ ವೇಳೆ ವ್ಯಕ್ತಿಗಳು ಅಲ್ಲಾಡಿದ್ದು, ಮಾತಾಡಿರುವ ಅಪರೂಪದ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ.

ಅಂಥದ್ದೇ ಒಂದು ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿಯೂ ನಡೆದಿದೆ. ಆದರೆ ಇಲ್ಲಿ ನಡೆದಿರುವುದು ಸ್ವಲ್ಪ ಭಿನ್ನ ಘಟನೆಯಷ್ಟೇ.

ಹೃದಯಾಘಾತದಿಂದ ಈರಣ್ಣ ಕಾಂಬ್ಳೆ ಎಂಬುವವರು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದರು. ಇವರು ಸುರಶೆಟ್ಟಿಕೊಪ್ಪ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಕಿಮ್ಸ್‌ನಿಂದ ಹೆಬ್ಬಳ್ಳಿಗೆ ತಂದು ಇವರ ಅಂತ್ಯಸಂಸ್ಕಾರದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶವದ ಅಂತ್ಯಸಂಸ್ಕಾರಕ್ಕೂ ಮುನ್ನ ಸ್ನಾನ ಮಾಡಿಸುವುದು ಪದ್ಧತಿ. ಅದರಂತೆಯೇ ಈರಣ್ಣ ಅವರ ಮೃತದೇಹಕ್ಕೆ ಸ್ನಾನ ಮಾಡಿಸುತ್ತಿದ್ದ ಸಂದರ್ಭದಲ್ಲಿ, ಅವರು ನೀರು ಕುಡಿದರು ಎಂದು ಅಲ್ಲಿದ್ದವರು ಯಾರೋ ಹೇಳಿದರು.

ಇದನ್ನೂ ಓದಿ: ಆನ್‌ಲೈನ್‌ಕ್ಲಾಸ್‌ಗಾಗಿ ಏಕೈಕ ಆಧಾರ ಹಸು ಮಾರಿದವರ ಹುಡುಕುತ್ತಿದ್ದಾರೆ ಸೋನು…

ಅದನ್ನೇ ಎಲ್ಲರೂ ನಂಬಿದರು. ತಾವು ನೀರು ಕುಡಿದುದ್ದನ್ನು ನೋಡಿರುವುದು ನಿಜ ಎಂದು ಅವರು ಹೇಳಿದ್ದರಿಂದ, ಮನೆಯವರಿಗೆಲ್ಲಾ ಒಂದು ರೀತಿಯ ಸಂತೋಷವಾಯಿತು. ಈರಣ್ಣ ಅವರಿಗೆ ಇನ್ನೂ ಜೀವವಿದೆ ಎಂದೇ ಕುಟುಂಬಸ್ಥರು ಭಾವಿಸಿದರು.

ಹೀಗಾಗಿ ಕೂಡಲೇ ಅಂತ್ಯಸಂಸ್ಕಾರವನ್ನು ಅಲ್ಲಿಗೇ ನಿಲ್ಲಿಸಿ, ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ವೈದ್ಯರು ಇವರು ಮೃತಪಟ್ಟಾಗಿದೆ ಎಂದು ಖಚಿತಪಡಿಸಿದರು. ನಿರಾಸೆಗೊಂಡ ಕುಟುಂಬಸ್ಥರು ಮತ್ತೆ ಮನೆಗೆ ಮರಳಿ ಅಂತ್ಯಸಂಸ್ಕಾರ ಪೂರ್ಣಗೊಳಿಸಿದರು.

ಆದರೆ ಇವರು ನೀರು ಕುಡಿದದ್ದು ನಿಜ. ದೇಹದಲ್ಲೂ ಉಷ್ಣಾಂಶ ಇತ್ತು. ಕೈ ಕಾಲು ಸ್ವಲ್ಪ ಚಲನಗೊಂಡಿದ್ದವು. ಅವರಿಗೆ ಜೀವವಿತ್ತು ಎಂದು ಗ್ರಾಮಸ್ಥರೊಬ್ಬರು ಹೇಳಿದರು.