ಕಾಸರಗೋಡು: ನಗರದ ಕಸಬಾ ಹಾರ್ಬರ್ ರಸ್ತೆ ನಿವಾಸಿ, ಮೀನು ಕಾರ್ಮಿಕ ಸುರೇಂದ್ರನ್ ಅವರ ಪುತ್ರ ಧನಶ್ಯಾಂ(25)ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಧನಶ್ಯಾಂ ಇತ್ತೀಚೆಗಷ್ಟೆ ಊರಿಗೆ ವಾಪಸ್ಸಾಗಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.