ಜಿಲ್ಲೆ

ಗ್ರಾಹಕರ ಆಪಾದನೆಗೆ ಗುರಿಯಾದ ಡಿಸಿಸಿ ಬ್ಯಾಂಕ್​...!

ಕಿರುವಾರ ಎಸ್.ಸುದರ್ಶನ್

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಒಂದು ಕಾಲದಲ್ಲಿ ಜನರ ಮನೆಮಾತಾಗಿದ್ದ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್​ (ಡಿಸಿಸಿ ಬ್ಯಾಂಕ್​) ಹಣಕಾಸಿನ ಸಕ್ರಿಯತೆಯನ್ನು ಕಳೆದುಕೊಂಡು ಜನರಿಂದ ದೂರವಾಗುತ್ತಿದೆ ಎಂಬ ಅಪಾದನೆಗೆ ಗುರಿಯಾಗಿದೆ.

ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದು ಚುನಾವಣೆಯು ನನೆಗುದಿಗೆ ಬಿದ್ದಿತ್ತು. ಇದರಿಂದಾಗಿ ಚುನಾವಣೆ ಯಾವಾಗ ನಡೆದು ಜನರಿಗೆ ಸೌಲಭ್ಯ ಸಿಗುತ್ತದೆ ಎಂದು ಕಾತರದಲ್ಲಿದ್ದರು. ಜೂ.25 ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದೆಯಾದರೂ, ಎರಡು ಕ್ಷೇತ್ರಗಳ ಲಿತಾಂಶ ಘೋಷಣೆ ಬಾಕಿಯಿದೆ. ಇದರಿಂದ ಅಧ್ಯಕ್ಷ&ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ವ್ನಿ ಎದುರಾಗಿದೆ. ಸಕಾಲಕ್ಕೆ ಆಡಳಿತ ಮಂಡಳಿಯು ಅಧಿಕಾರಕ್ಕೆ ಬಾರದೆ ಇರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೋಲಾರ ತಾಲೂಕಿನ ಸೊಸೈಟಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪಾತಾಳಕ್ಕೆ ಕುಸಿದು ಹಣಕಾಸು ವ್ಯವಹಾರದ ಅರ್ಹತೆ ಕಳೆದುಕೊಂಡಿದ್ದ ಬ್ಯಾಂಕಿಗೆ 2014ರಲ್ಲಿ ಅಧಿಕಾರಕ್ಕೆ ಬಂದ ಬೋರ್ಡ್​ ಶಕ್ತಿ ತುಂಬಿತು. ಅನರ್ಹತೆಯಿಂದ ಅರ್ಹತೆ ಪಡೆದುಕೊಂಡು ನಬಾರ್ಡ್​, ಅಪೆಕ್ಸ್​ ಬ್ಯಾಂಕಿನಿಂದ ಸಾಲ ಪಡೆದು ಸ್ತ್ರೀಶಕ್ತಿ ಸಂಗಳಿಗೆ, ರೈತರಿಗೆ ಸಾಲ ವಿತರಿಸುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಚೇತರಿಸಿಕೊಂಡ ನಂತರ ಆರಂಭದಲ್ಲಿ ಟೇಬಲ್​ ಮೇಲೆ ಕಂತೆ ಕಂತೆ ಹಣದ ಕಟ್ಟುಗಳನ್ನು ಇಟ್ಟು ಮಹಿಳೆಯರಿಗೆ ಸಾಲ ವಿತರಿಸುವ ಮೂಲಕ ಗ್ರಾಹಕರನ್ನು, ಠೇವಣಿದಾರರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಸತತವಾಗಿ ಎರಡು ಅವಧಿಯಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷರಾಗಿದ್ದ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯು ಎರಡು ಜಿಲ್ಲೆಗಳ ರೈತರು, ಸ್ತ್ರೀಶಕ್ತಿ ಸಂಗಳಿಗೆ ಕೋಟ್ಯಂತರ ರೂ. ಸಾಲ ವಿತರಣೆ ಮಾಡಿದರು. ಅಷ್ಟೇ ಪ್ರಮಾಣದಲ್ಲಿ ಸಾಲ ವಸೂಲಾತಿಯೂ ಆಗುತ್ತಿತ್ತು. ಈಗ

ಶಾಸಕರಾದ ಎಸ್​.ಎನ್​.ಸುಬ್ಬಾರೆಡ್ಡಿ, ಕೆಜಿಎ್​ ರೂಪಕಲಾ ಆಯ್ಕೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಎರಡೂ ಜಿಲ್ಲೆಯ ರೈತರು, ಮಹಿಳೆಯರು ಒತ್ತಾಯಿಸಿದ್ದಾರೆ.

* ಸಾಲ ವಿತರಣೆ ಸ್ಥಗಿತ

2024ಕ್ಕೂ ಮುಂಚೆ ಆಡಳಿತ ಮಂಡಳಿ ಅಧಿಕಾರದಲ್ಲಿ ಇದ್ದಾಗ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಸುಮಾರು 25 ಸಾವಿರ ಸ್ತ್ರೀ ಶಕ್ತಿ ಸಂಗಳ ಸದಸ್ಯರಿಗೆ 730 ಕೋಟಿ ರೂ. ಸಾಲ ವಿತರಣೆ ಮಾಡಲಾಗಿತ್ತು. ಅದರಲ್ಲಿ ಕೊಂಚ ಸಾಲ ಮರುಪಾವತಿಯಾಗಿ 420 ಕೋಟಿ ರೂ.ಗೆ ಬಂದು ನಿಂತಿದೆ. ಇದರಿಂದಾಗಿ ಸಾಲ ಸೌಲಭ್ಯ ವಿತರಣೆ ಮಾಡುವುದನ್ನು ಬ್ಯಾಂಕ್​ ಸ್ಥಗಿತಗೊಳಿಸಿದೆ. ಮರುಪಾವತಿಯಾಗದೆ ಇರುವುದರಿಂದ ಹೊಸ ಅಥವಾ ನವೀಕೃತ ಸಾಲ ಕೊಡಲಾಗುತ್ತಿಲ್ಲ. ಇದರಿಂದ ಸುಸ್ತಿ ಜಾಸ್ತಿಯಾಗಿದ್ದು, ಅಪೆಕ್ಸ್​ನಿಂದ ಪಡೆದುಕೊಂಡಿರುವ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡದೆ ಅರ್ಹತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.

* ಬಾಗಿಲು ಮುಚ್ಚುವ ಆತಂಕ

ಎರಡೂ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 210 ಸೊಸೈಟಿಗಳು ಆರ್ಥಿಕವಾಗಿ ಸದೃಢವಾಗಿದ್ದು, ಡಿಸಿಸಿ ಬ್ಯಾಂಕ್​ನಿಂದಲೇ ಹಣಕಾಸು ಪಡೆದುಕೊಂಡು ಶಕ್ತಿ ಅನುಸಾರವಾಗಿ ಸಾಲ ವಿತರಣೆ ಮಾಡಿವೆ. ಇದೀಗ ಅವುಗಳಿಗೂ ಯಾವುದೇ ಸೌಲಭ್ಯ ನೀಡಲಾಗದ ಸ್ಥಿತಿಗೆ ಬ್ಯಾಂಕ್​ ಬಂದು ನಿಂತಿದೆ. ಇದೇ ಪರಿಸ್ಥಿತಿಯು ಮುಂದುವರೆದರೆ ಗ್ರಾಹಕರು ಬ್ಯಾಂಕಿನಲ್ಲಿ ವಹಿವಾಟು ನಡೆಸುವುದನ್ನು ನಿಲ್ಲಿಸುತ್ತಾರೆ. ಆಗ ಸಹಕಾರಿ ಬ್ಯಾಂಕ್​ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಬಹುದು.

* ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ವಿಳಂಬವೇಕೆ?

ಕೋಲಾರ ತಾಲೂಕಿನ ಎಸ್​ಎ್​ಸಿಎಸ್​, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಎಸ್​ಎ್​ಸಿಎಸ್​ ಹಾಗೂ ಚಿಕ್ಕಬಳ್ಳಾಪುರ ಎಂಪಿಸಿಎಸ್​ ಕ್ಷೇತ್ರಗಳ ಅಭ್ಯರ್ಥಿಗಳ ಲಿತಾಂಶ ಘೋಷಣೆ ಬಾಕಿಯಿದೆ. ಮತ ಹಕ್ಕು ಪಡೆದುಕೊಂಡಿರುವ ಸೊಸೈಟಿಗಳ ಮತದಾನ ಪ್ರಶ್ನಿಸಿ ಕೆಲವರು ಕೋರ್ಟ್​ ಮೋರೆ ಹೋಗಿದ್ದಾರೆ. ಇದುವರೆಗೂ ಯಾವುದೇ ರೀತಿ ತೀರ್ಪು ಪ್ರಕಟಣೆಯಾಗದೆ ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಲಂಬವಾಗಿದೆ.

* ಸಾಲ ವಸೂಲಿಯಲ್ಲಿ ನಿರ್ಲಕ್ಷ್ಯ

ಈಗಾಗಲೇ ಸಾಲ ಪಡೆದುಕೊಂಡಿರುವ 25 ಸಾವಿರ ಸಂಗಳ ಪೈಕಿ ಕೆಲ ಮಂದಿ ಸಾಲ ಮರುಪಾವತಿ ಮಾಡಿದ್ದರೆ, ಇನ್ನು ಕೆಲವರು ಸಾಲದ ಕಂತನ್ನು ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡು ಸುಸ್ತಿಯಾಗಿದ್ದಾರೆ. ಸಾಲ ವಸೂಲಿ ಮಾಡುವ ಬಗ್ಗೆ ಕೇಂದ್ರ ಕಚೇರಿ, ಶಾಖೆ ಅಥವಾ ಸೊಸೈಟಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಸುಸ್ತಿಗೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ ಹಣಕಾಸು ವರ್ಷ ಅಂತ್ಯದೊಳಗೆ ಮತ್ತಷ್ಟು ನಷ್ಟವಾಗುವ ಸಾಧ್ಯತೆಯಿದೆ.

ಕೋಟ್​..

ಕೆಲವರು ಮತದಾನ ಪ್ರಶ್ನಿಸಿ ಕೋರ್ಟ್​ ಮೋರೆ ಹೋಗಿದ್ದು, ಎರಡ್ಮೂರು ದಿನಾಂಕದಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದ್ದು, ಆನಂತರ 15 ದಿನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಲಿದೆ. ಸೋಸೈಟಿ ಮಟ್ಟದಲ್ಲಿ ಎಸ್​ಎಚ್​ಜಿ ಸಾಲ ವಸೂಲಿ ಆಗುತ್ತಿದ್ದು, ಅಧಿಕಾರಿಗಳು ಕಾಳಜಿವಹಿಸದೆ ಇರುವುದರಿಂದ ಬ್ಯಾಂಕಿನಿಂದ, ಶಾಖೆಯಿಂದ ವಿತರಣೆಯಾಗಿರುವ ಸಾಲ ವಸೂಲಿ ಆಗುತ್ತಿಲ್ಲ. ಇದರಿಂದ ಎನ್​ಪಿಎ ಜಾಸ್ತಿಯಾಗುವ ಸಾಧ್ಯತೆಯಿದೆ.

- ಎಂ.ಎಲ್​.ಅನಿಲ್​ ಕುಮಾರ್​, ಎಂಎಲ್ಸಿ, ಕೋಲಾರ

ಕೋಟ್​...

ರೈತರಿಗೆ ಸಕಾಲಕ್ಕೆ ಡಿಸಿಸಿ ಬ್ಯಾಂಕಿನಿಂದ ಬೆಳೆ ಸಾಲ ನೀಡದೆ ಇರುವುದರಿಂದ ಖಾಸಗಿ ವ್ಯಕ್ತಿಗಳ ಬಳಿ ಸಾಲಕ್ಕೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಬ್ಯಾಂಕಿನಿಂದ ಸ್ಥಗಿತಗೊಳಿಸಿರುವ ಸಾಲ ವಿತರಣೆ ಮಾಡಿಸಲು ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೂಚಿಸಬೇಕು.

- ನವೀನ್​ ಗಿರಿ, ವೇಮಗಲ್​