ಕಾರವಾರ: ಡೆಂಘೆ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಅಽಕಾರಿಗಳಲ್ಲಿ ಚುರುಕು ಮೂಡಿಸುವ ಸಲುವಾಗಿ ಸ್ವತಃ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕಣಕ್ಕಿಳಿದಿದ್ದಾರೆ.
ಶುಕ್ರವಾರ ಕಾರವಾರದ ಕಾಜುಬಾಗದ ಅರ್ಜುನ ಥಿಯೇಟರ್ ಹಿಂಬದಿ ಭಾಗದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರ ಕಾಂದೂ ಇತರರು ಮನೆ, ಮನೆಗಳಿಗೆ ಹೋಗಿ ಜಾಗೃತಿ ಮೂಡಿದರು. ಪ್ರತಿ ಶುಕ್ರವಾರ ಈಡೀಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಅದರ ಭಾಗವಾಗಿ ಅವರು ಆರೋಗ್ಯ ಅಧಿಕಾರಿಗಳ ಜತೆ ಕಾರವಾರದ ಕಾಜುಬಾಗದ ಅರ್ಜುನ ಥಿಯೇಟರ್ ಹಿಂಬದಿ ಭಾಗದಲ್ಲಿ ಮನೆಗಳಿಗೆ ತೆರಳಿ ಜನರಿಗೆ ಸೂಚನೆ ನೀಡಿದರು.
ಡೆಂಘೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುವ ಎಲ್ಲ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ತಮ್ಮ ಮನೆಯ ಒಳಗೆ ಮತ್ತು ಮನೆಯ ಸುತಮುತ್ತಲಿನ ಅವರಣದಲ್ಲಿ ತಪ್ಪದೇ ಅಳವಡಿಸಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ. ಡ್ರಮ್, ಬ್ಯಾರಲ್‌ಗಳಲ್ಲಿ ತುಂಬಿರುವ ನೀರನ್ನು ಆಗಾಗ್ಗೆ ಬದಲಾಯಿಸಬೇಕು ಎಂದು ಸೂಚಿಸಿದರು. ಕಾರವಾರ ಎಸಿ ಕನಿಷ್ಕ, ಡಿಎಚ್‌ಒ ಡಾ. ನಟರಾಜ್, ತಹಸೀಲ್ದಾರ್ ನಿಶ್ಚಲ್ ನರೋನಾ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಽಕಾರಿ ಡಾ. ರಮೇಶ ರಾವ್ ಇದ್ದರು.
ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ:
ಸೀಬರ್ಡ್ ನೌಕಾ ಯೋಜನೆ ಹಾಗೂ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಗಳಿಂದ ಅರಗಾ, ಚೆಂಡಿಯಾ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಆ ಭಾಗಗಳಿಗೆ ಭೇಟಿ ನೀಡಿ ಅಽಕಾರಿಗಳಿಂದ ಮಾಹಿತಿ ಪಡೆದುಕೊಂಡರು.