ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನೆಲ, ಜಲ, ಮೂಲ ಸಂಸ್ಕೃತಿಯನ್ನು ಉಳಿಸದಿದ್ದರೆ ನಮ್ಮ ನೆಲೆ ಉಳಿಯಲು ಸಾಧ್ಯವಿಲ್ಲ. ದೇಶ ಉಳಿದರೆ ಧರ್ಮ ಉಳಿಯುತ್ತದೆ. ಆ ನಿಟ್ಟಿನಲ್ಲಿ ಉಗ್ರರ ನಿರ್ಮೂಲನದ ಮೂಲಕ ಭವ್ಯ ಭಾರತಕ್ಕೆ ಗಟ್ಟಿ ಹೆಜ್ಜೆ ಇಡಲಾಗಿದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪುದು ಗ್ರಾಮದ ಸುಜೀರು ದೈಯಡ್ಕದಲ್ಲಿ ಶ್ರೀ ರಕ್ತೇಶ್ವರಿ ಸಪರಿವಾರ ದೈವಗಳ ಸಾನ್ನಿಧ್ಯ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ರವೀಂದ್ರ ಕಂಬಳಿ ಅವರನ್ನು ಗೌರವಿಸಲಾಯಿತು. ರಾಮಕೃಷ್ಣ ಚೌಟ ಸುಜೀರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್, ಜ್ಯೋತಿಷಿ ಅನಿಲ್ ಪಂಡಿತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ವೀರ ಹನುಮಾನ್ ಮಂದಿರದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ನೈಜೀರಿಯದ ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಪುದು ಗ್ರಾಪಂ ಸದಸ್ಯ ವಿಶು ಕುಮಾರ್ ಉಪಸ್ಥಿತರಿದ್ದರು. ನರೇಂದ್ರ ನಾಯಕ್ ಸುಜೀರು ಬೀಡು ಸ್ವಾಗತಿಸಿದರು. ರವೀಂದ್ರ ಕಂಬಳಿ ಸುಜೀರು ಬೀಡು ಪ್ರಾಸ್ತಾವಿಕ ಮಾತನಾಡಿದರು. ಕಿಶೋರ್ ಸುಜೀರು ವಂದಿಸಿದರು. ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.