ಜಿಲ್ಲೆ

VIDEO|'ಪವರ್ ಆಫ್ ಪಾಕಿಸ್ತಾನ'ದಲ್ಲಿ ದಾವಣಗೆರೆ ಪೊಲೀಸ್ ಕಾನ್​​ಸ್ಟೆಬಲ್​ ಸನಾವುಲ್ಲಾ!

ದಾವಣಗೆರೆ: ಪೊಲೀಸ್ ಇಲಾಖೆಯಲ್ಲೊಬ್ಬ ಪಾಕ್ ಪ್ರೇಮಿ ಇರುವುದು ಇದೀಗ ಬೆಳಕಿಗೆ ಬಂದಿದ್ದು, ಡಿಎಆರ್‌ ಸಿಬ್ಬಂದಿ ವಿರುದ್ಧ ದೇಶದ್ರೋಹ ಆರೋಪ ಕೇಳಿಬಂದಿದೆ.

ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ವಾಹನ ಚಾಲಕ ಸನಾವುಲ್ಲಾ ವಿರುದ್ಧ ಪವರ್ ಆಫ್ ಪಾಕಿಸ್ತಾನ ಎನ್ನುವ ಸಾಮಾಜಿಕ ಜಾಲತಾಣ ಪೇಜ್ ಶೇರ್ ಮಾಡಿದ ಆರೋಪ ಎದುರಾಗಿದೆ.

"2008 ಬ್ಯಾಚ್ ಪೊಲೀಸ್ ಟೀಮ್" ಎಂಬ ಹೆಸರಿನ ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಪಾಕ್​ ಪರವಾಗಿರು ಜಾಲತಾಣ ಪೇಜ್​ ಶೇರ್​ ಮಾಡಿದ್ದಾರೆನ್ನಲಾಗಿದೆ. ಇದೇ ಮೊದಲೇನಲ್ಲ, 2014ರಲ್ಲಿ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸನಾವುಲ್ಲಾ ಸಸ್ಪೆಂಡ್​ ಆಗಿದ್ದ.

ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಎನ್ನುವಂತೆ ಇದೀಗ ಮತ್ತೊಂದು ದೇಶವಿರೋಧಿ ಪೋಸ್ಟ್ ಹಾಕಿದ್ದು, ದಾವಣಗೆರೆ ಎಸ್ಪಿ ಹನುಮಂತರಾಯ ಅವರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)