ಬೆಂಗಳೂರು: ಸರ್ಕಾರದ ಬಳಕೆಗೆ ನೇರವಾಗಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸೇವಾದಾರರು ಅಥವಾ ಥರ್ಡ್ ಪಾರ್ಟಿ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸಿದರೂ ರಕ್ಷಣೆ ಮಾಡುವ ಯಾವುದೇ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. ಈ ಡೇಟಾ ಈಗಿನ ಕಾಲಘಟ್ಟದಲ್ಲಿ ದೊಡ್ಡ ಆಸ್ತಿ ಎಂದೇ ಬಹುರಾಷ್ಟ್ರೀಯ ಕಂಪನಿಗಳು ಭಾವಿಸುತ್ತವೆ ಮತ್ತು ಅದನ್ನು ಭಾರಿ ಮೊತ್ತಕ್ಕೆ ಖರೀದಿಸುತ್ತವೆ. ಆ ಮಾಹಿತಿ ಅನುಸಾರವೇ ಗ್ರಾಹಕರನ್ನು ಸೃಷ್ಟಿಕೊಳ್ಳುತ್ತವೆ. ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ತರುತ್ತವೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸುಲಭವಾಗಿ ಟಾರ್ಗೆಟ್ ಮಾಡುತ್ತವೆ. ಅಲ್ಲದೆ, ಜನರು ನೀಡಿದ ಮಾಹಿತಿ ಬೇರೆಯವರಿಗೆ ಸಿಗುವಂತಾಗುವುದು ದೌರ್ಭಾಗ್ಯದ ಸಂಗತಿ. ಈ ಕಾರಣಕ್ಕೆ ಒಂದು ಸ್ಪಷ್ಟ ನೀತಿ ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಆದೇಶ ಮತ್ತು ಶಿಷ್ಟಾಚಾರ ಮುಂದಿಟ್ಟುಕೊಂಡು ನೀತಿ ತರುವ ಜತೆಗೆ ಕೇಂದ್ರ ಸರ್ಕಾರ ಜಾರಿ ಮಾಡುವ ಡೇಟಾ ಪ್ರೊಟೆಕ್ಷನ್ ಆಕ್ಟ್ ಬಳಿಕ ಅನುಷ್ಠಾನ ಮಾಡಿಕೊಳ್ಳಲಿದೆ.
ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆಕೋರರ ಹೆಡೆಮುರಿ ಕಟ್ಟಲು ಸಿಎಂ ಸಜ್ಜು; ಗೂಂಡಾ ಕಾಯ್ದೆ, ನಷ್ಟ ವಸೂಲಿ ಬ್ರಹ್ಮಾಸ್ತ್ರ ಬಳಕೆ
ಡೇಟಾದಲ್ಲಿ ಏನಿರುತ್ತೆ? ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಹಣಕಾಸು ಸ್ಥಿತಿಗತಿ, ವಾಹನ ವಿವರ, ಆರೋಗ್ಯ ವಿಚಾರ
ಆದೇಶದಲ್ಲೇನಿದೆ? : ಸ್ಟೇಟ್ ಡೇಟಾ ಸೆಂಟರ್ನಲ್ಲಿ ರಾಜ್ಯ ಸರ್ಕಾರದ ಬಹು ಮುಖ್ಯವಾದ ಅನೇಕ ಅಪ್ಲಿಕೇಶನ್ಗಳು ಮತ್ತು ದತ್ತಾಂಶ ಇರುವುದರಿಂದ ಅಲ್ಲಿಂದ ಹೊಸ ಸಾಫ್ಟ್ ವೇರ್ ಅಪ್ಲಿಕೇಶನ್ ನಿರ್ವಹಿಸಲು ಭದ್ರತಾ ಕಾರಣಗಳಿಗಾಗಿ ಎಲ್ಲರೂ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: VIDEO: ಗಣಪತಿ ಮೂರ್ತಿಯನ್ನು ನೆಲಕ್ಕೆಸೆದ ಬುರ್ಖಾಧಾರಿ ಮಹಿಳೆ ವಿರುದ್ಧ ಕ್ರಮ ಜರುಗಿಸಿದ ಮುಸ್ಲಿಂ ರಾಷ್ಟ್ರ!
ಆದ್ದರಿಂದ ಅಂತಹ ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ರಕ್ಷಣಾ/ ನಿರ್ವಹಣಾ ನೀತಿಯನ್ನು ಒಂದು ದಾಖಲೆ ರೂಪದಲ್ಲಿ ತುರ್ತಾಗಿ ಪ್ರಕಟಿಸಲಾಗಿದೆ. ಪ್ರೋಸೆಸ್, ಪ್ರೊಡ್ಯೂಸರ್ಸ್ ಇನ್ ಅಪ್ಲಿಕೇಶನ್ ಹೋಸ್ಟಿಂಗ್ ಮತ್ತು ಬೆಸ್ಟ್ ಪ್ರಾಕ್ಟೀಸಸ್ ಇನ್ ಡೇಟಾ ಪ್ರೊಟೆಕ್ಷನ್ ದಾಖಲೆಯನ್ನು ಇ- ಆಡಳಿತ ಕೇಂದ್ರ ಸಿದ್ಧಪಡಿಸಿದೆ. ಅದರ ಅನ್ವಯ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ಅಥವಾ ನಿರ್ವಹಣಾ ನೀತಿಯನ್ನು ಪಾಲಿಸಲು ಆದೇಶಿಸಲಾಗಿದೆ.