ಜಿಲ್ಲೆ

ಕಜೆಪದವಿನಲ್ಲಿ ಅಪಾಯಕಾರಿ ಹೊಂಡ

ಸೌಮ್ಯ ಆರ್

ಗುರುಪುರ: ಬಜ್ಪೆ ಮತ್ತು ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯ ಕಡಿದಾದ ತಿರುವಿನ ಕಜೆಪದವು ಎಂಬಲ್ಲಿ ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿದ್ದರೂ ಸಂಬಂಧಪಟ್ಟ ಇಲಾಖೆ ಈವರೆಗೂ ಇತ್ತ ಗಮನ ಹರಿಸಿಲ್ಲ.

ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳು ಕಜೆಪದವು ತಿರುವಿನಲ್ಲಿರುವ ಈ ಮರಣಗುಂಡಿಗೆ ಬೀಳುವ ಸಾಧ್ಯತೆ ಹೆಚ್ಚಿದ್ದು, ಇಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಅಪಾಯಕಾರಿಯಾಗಿದೆ. ಈಗಾಗಲೇ ಕೆಲವು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.

ಬಜ್ಪೆ- ಬಿ.ಸಿ.ರೋಡ್ ರಾಜ್ಯ ಹೆದ್ದಾರಿಯ ಬಜ್ಪೆಯಿಂದ ಗುರುಪುರ ಕೈಕಂಬದವರೆಗೆ ಸಾಮಾನ್ಯ ಗುಂಡಿಗಳಿಗೆ ಕೊರತೆ ಇಲ್ಲದಿದ್ದರೂ ಕಜೆಪದವಿನಲ್ಲಿರುವ ಜೀವ ತೆಗೆಯುವ ಅಪಾಯಕಾರಿ ಗುಂಡಿಗೆ ತಕ್ಷಣ ಕಾಯಕಲ್ಪ ಕಲ್ಪಿಸದಿದ್ದಲ್ಲಿ ಸರಣಿ ಅಪಘಾತ ಸಂಭವಿಸಲಿದೆ.