ಕಾರವಾರ: "ದಲಿತರ ನಡೆ ಮುರ್ಡೇಶ್ವರ ಕಡೆ" ಹೆಸರಿನಲ್ಲಿ ನ.21 ರಂದು ಹೋರಾಟ (campaign) ಹಮ್ಮಿಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಸಂವಿಧಾನ ಹಕ್ಕು ರಕ್ಷಣಾ ವೇದಿಕೆಯ ಅಧ್ಯಕ್ಷ ತುಳಸಿದಾಸ ಪಾವಸ್ಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೀನುಗಾರಿಕೆ ವೃತ್ತಿ ನಡೆಸುವ ಮೊಗೇರರು ಸಾಮಾಜಿಕವಾಗಿ ಮೇಲ್‌ಸ್ತರÀದಲ್ಲಿದ್ದಾರೆ. ಭಟ್ಕಳ ಭಾಗದ ಗೊಂಡರು ಗ್ರಾಮ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಆದರೆ, ಅವರು ಎಸ್‌ಸಿ ಪ್ರಮಾಣಪತ್ರದೊಂದಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ನೈಜ ಪರಿಶಿಷ್ಟರಿಗೆ ಸಿಗಬೇಕಾದ ಸಂವಿಧಾನಬದ್ಧ ಸೌಲಭ್ಯಗಳನ್ನು ಕಸಿದುಕೊಂಡಿದ್ದಾರೆ. ಇದನ್ನು ಖಂಡಿಸಿ ಈ ಹೋರಾಟ ನಡೆಯಲಿದೆ. ನ.21 ರಂದು ರಾಜ್ಯಮಟ್ಟದ ವಿಶ್ವ ಮೀನುಗಾರಿಕೆ ದಿನವು ಮುರ್ಡೇಶ್ವರದಲ್ಲಿ ನಡೆಯುವುದರಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೆಲ್ಲ ಸರಿಪಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೊಗೇರರ ಹೋರಾಟಕ್ಕೆ ಬೆಂಬಲ ನೀಡಿ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಅವರ ವಿರುದ್ಧವೂ ಹೋರಾಟ Campaign ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದರು.
ದಸಂಸ ರಾಜ್ಯ ಸಂಚಾಲಕ ದೀಪಕ ಕುಡಾಳಕರ್ ಮಾತನಾಡಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮೊಗೇರ ಹಾಗೂ ಹಾಗೂ ಗೊಂಡ್ ಜಾತಿ ಪ್ರಮಾಣಪತ್ರದ ಹಲವು ಪ್ರಕರಣಗಳನ್ನು ತನಿಖೆ ನಡೆಸಿ. ಅವುಗಳನ್ನು ರದ್ದುಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದೆ. ಮಾತ್ರವಲ್ಲ ಅಂಥವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ಕೂಡ ದಾಖಲು ಮಾಡಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಸಹ ಸಂವಿಧಾನಬದ್ಧವಾಗಿ ತನ್ನ ಕರ್ತವ್ಯ ನಿರ್ವಹಿಸಿದೆ. ಸ್ವತಃ ಸಚಿವ ಮಂಕಾಳ ವೈದ್ಯ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರದೊಂದಿಗೆ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಈಗ ಅವರು ಹಿಂದುಳಿದ ವರ್ಗಗಳ ಪ್ರಮಾಣ ಪತ್ರ ಪಡೆದಿದ್ದಾರೆ. ಇದೇ ಅವರ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಂಗಳ, ದಲಿತ ಸಂಘಟನೆಗಳ ಪ್ರಮುಖರಾದ ಕಿರಣ ಶಿರೂರು, ಗೋವಿಂದ ಮುಕ್ರಿ, ಘನಶ್ಯಾಮ ಪಾಠಣಕರ, ಸುಭಾಷ ಕಾನಡೆ, ರಾಜೇಂದ್ರ ಮಾದರ, ಇತರರು ಇದ್ದರು.