ದೇವದುರ್ಗದ ಹಳ್ಳದರಾಯನದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು. ವೈದ್ಯಾಧಿಕಾರಿ ಡಾ.ಪ್ರವೀಣ್‌ಕುಮಾರ, ಮುಖ್ಯಶಿಕ್ಷಕ ಗೌಡಪ್ಪ, ಆರೋಗ್ಯ ಸಹಾಯಕಿ ರೋಹಿಣಿ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆ ಸುಜಾತಾ ನಾಯಕ, ಲಕ್ಷ್ಮೀ, ರೇಣುಕಾ, ಚಾಂದುಬೀ ಇತರರಿದ್ದರು. 
ಜಿಲ್ಲೆ

ನಿತ್ಯ ಪೌಷ್ಟಿಕಾಂಶ ಉಳ್ಳ ಆಹಾರ ಸೇವಿಸಿ

ದೇವದುರ್ಗ: ಇಂದಿನ ಕಲುಷಿತ ವಾತಾವರಣದಲ್ಲಿ ಹಣಕ್ಕಿಂತ ಆರೋಗ್ಯವೇ ಮುಖ್ಯ. ಉತ್ತಮ ಹಾಗೂ ಆರೋಗ್ಯವಂತ ಜೀವನವೇ ಎಲ್ಲರ ಆಸ್ತಿಯಾಗಿದೆ ಎಂದು ವೈದ್ಯಾಧಿಕಾರಿ ಡಾ.ಪ್ರವೀಣ್‌ಕುಮಾರ ಹೇಳಿದರು.

ಪುರಸಭೆ ವ್ಯಾಪ್ತಿಯ ಹಳ್ಳದರಾಯನದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಆರೋಗ್ಯವಂತ ಜೀವನ ನಡೆಸಲು ಪೌಷ್ಟಿಕ ಆಹಾರ ಅಗತ್ಯ. ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಕಂಡುಬರುವ ಅಪೌಷ್ಟಿಕತೆ, ಕಡಿಮೆ ತೂಕ ದೂರಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪೋಷಣ್ ಅಭಿಯಾನ ಕೂಡ ಒಂದಾಗಿದೆ.

ಅಂಗನವಾಡಿ ಮೂಲಕ ಅಪೌಷ್ಟಿಕ ಮಕ್ಕಳು, ಕಡಿಮೆ ತೂಕದ ತಾಯಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಫಲಾನುಭವಿಗಳು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.

ಗರ್ಭಿಣಿ, ಬಾಣಂತಿ, ಮಕ್ಕಳಲ್ಲಿರುವ ಅಪೌಷ್ಟಿಕತೆ ದೂರ ಮಾಡುವುದು ಯೋಜನೆಯ ಉದ್ದೇಶ. ದಿನನಿತ್ಯ ಪೌಷ್ಟಿಕಾಂಶ ಉಳ್ಳ ಆಹಾರ ಸೇವನೆ ಮಾಡಬೇಕು ಎಂದರು.