ಜಿಲ್ಲೆ

ಸಿಲಿಂಡರ್‌ ಸ್ಫೋಟ-ಹೊತ್ತಿ ಉರಿದ ಮನೆ

Uttara Kannada - Subash Hegde

ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಮನೊಂದೆರಲ್ಲಿ ಅಡುಗೆ ಅನಿಲದ ಸಿಲೆಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ಶನಿವಾರ ನಡೆದಿದೆ.

ಹೆಗಡೆಯ ಗುನಗನಕೊಪ್ಪದ ನಾರಾಯಣ ಮುಕ್ರಿ ಅವರ ಹಂಚಿನ ಮನೆಯೇ ಅಡುಗೆ ಅನಿಲ ಸಿಲೆಂಡರ್ ಸ್ಫೋಟದ ಅವಘಡಕ್ಕೆ ಒಳಗಾಗಿದೆ. ಮನೆಮಂದಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನಡೆದ ಘಟನೆಯಾದ್ದರಿಂದ ಯಾವುದೇ ಜೀವಾಪಾಯವಾಗಿಲ್ಲ.
ಸೋರುತ್ತಿದ್ದ ಅಡುಗೆ ಅನಿಲ ಸಿಲೆಂಡರ್ ಸ್ಫೋಟಕ್ಕೆ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಆಸುಪಾಸಿನ ಮನೆಯವರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ.

ಬಳಿಕ ಅಗ್ನಿಶಾಮಕದವರು ಬರುವ ಹೊತ್ತಿಗೆ ಬಹುತೇಕ ಮನೆ ಬೆಂಕಿಗಾಹುತಿಯಾಗಿದ್ದರೂ ಇನ್ನೊಂದು ಸಿಲೆಂಡರ್ ಸ್ಫೋಟಗೊಳ್ಳುವದರಿಂದ ರಕ್ಷಿಸಲಾಗಿದೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳ ಸುಟ್ಟಿರುವುದರಿಂದ ನಾರಾಯಣ ಮುಕ್ರಿ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.