ಜಿಲ್ಲೆ

ಸಿಲಿಂಡರ್ ಸ್ಫೋಟ:ಇಬ್ಬರು ಸಾವು

Uttara Kannada - Subash Hegde

ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾಮದ ಗಜನಿಹಿತ್ತಲದಲ್ಲಿ ಗ್ಯಾಸ್ ಸಿಲೆಂಡರ ಸ್ಪೋಟದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.
ಹಳದಿಪುರ ಗ್ರಾಮದ ಗಜನಿಹಿತ್ತಲದ ಯುಗಾದಿ ಶನಿಯಾರ ಗೌಡ ಇವರ ಮನೆಯಲ್ಲಿ ಏಪ್ರಿಲ್ 16ರ ರಾತ್ರಿ ಅಡುಗೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಗ್ಯಾಸ್ ಸಿಲೆಂಡರ್‌ನಿಂದ ಆಕಸ್ಮಿಕವಾಗಿ ಗ್ಯಾಸ್ ಸೋರಿಕೆ ಆಗಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿ ವ್ಯಾಪಿಸಿ ಯುಗಾದಿ ಗೌಡ (42) ಮತ್ತು ಹಳದಿಪುರ ನಿವಾಸಿ ಕೃಷ್ಣ ನಾರಾಯಣ ಗೌಡ (40) ಎಂಬಾತರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ತಕ್ಷಣ ಹೊನ್ನಾವರ ತಾಲೂಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಗೆ ಸಂಬAಧಿಸಿ ಹಳದಿಪುರ ಕರಿಮೂಲೆ ನಿವಾಸಿ ಈಶ್ವರ ತುಳುಸು ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಲ್ಲಿಸಿದ್ದಾರೆ.