ಬೆಂಗಳೂರು: ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಾಹನ ಸಂಚಾರ ಕಡಿಮೆ ಮಾಡುವ ಉದ್ದೇಶದಿಂದ ನಿಮಿರ್ಸಲಾಗುತ್ತಿರುವ ಸೈಕಲ್ ಪಥ ಹೊರವರ್ತುಲ ರಸ್ತೆಯಷ್ಟೇ ಅಲ್ಲದೆ, ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ)ಗಳಲ್ಲೂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ನಗರ ಭೂಸಾರಿಗೆ ನಿರ್ದೇಶನಾಯ ಬಿಬಿಎಂಪಿ ಸಹಕಾರದೊಂದಿಗೆ ಸೈಕಲ್ ಪಥ ಅನುಷ್ಠಾನಗೊಳಿಸುತ್ತಿದೆ.
ಸಿಬಿಡಿ ಪ್ರದೇಶದಲ್ಲಿ ಅನುಷ್ಠಾನ: ಈಗಾಗಲೆ ಗುರುತಿಸಿರುವ ಮಾರ್ಗಗಳು ಹೊರವರ್ತುಲ ರಸ್ತೆ ಮತ್ತು ಸಿಬಿಡಿ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವಂತೆ ನಿರ್ಮಾಣಗೊಳ್ಳಲಿವೆ. ಆಮೂಲಕ ಹೊರವರ್ತುಲ ರಸ್ತೆಯಲ್ಲಿನ 16.9 ಕಿ.ಮೀ. ಹೊರತುಪಡಿಸಿ ಹೆಚ್ಚುವರಿಯಾಗಿ 18.24 ಕಿ.ಮೀ. ಉದ್ದದ ಸೈಕಲ್ ಪಥ ನಿಮಿರ್ಸಲಾಗುತ್ತದೆ. ಸದ್ಯ ಬಿಬಿಎಂಪಿ ಡಲ್ಟ್ಗೆ ಪ್ರಸ್ತಾವನೆ ಕಳುಹಿಸಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಸ್ಮಾರ್ಟ್ಸಿಟಿ ಲಿ.ಗೆ ಪ್ರಸ್ತಾವನೆ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, 2021ರ ಮಾರ್ಚ್ ವೇಳೆಗೆ 35 ಕಿ.ಮೀ. ಉದ್ದದ ಮಾರ್ಗದಲ್ಲಿ ಸೈಕಲ್ ಪಥ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ.
ಯಾವೆಲ್ಲ ಮಾರ್ಗದಲ್ಲಿ ಸೈಕಲ್ ಪಥ:
ದೊಮ್ಮಲೂರು ಮೇಲ್ಸೇತುವೆಯಿಂದ ಹೊಸೂರು ರಸ್ತೆ: 5.4 ಕಿ.ಮೀ.
ಸ್ವಾಮಿ ವಿವೇಕಾನಂದ ರಸ್ತೆಯಿಂದ ಸಿಲ್ಕ್ಬೋರ್ಡ್ ಜಂಕ್ಷನ್: 2.59 ಕಿ.ಮೀ.
ಹಳೆ ಮದ್ರಾಸ್ ರಸ್ತೆಯಿಂದ ಡಿ.ಭಾಸ್ಕರನ್ ರಸ್ತೆ: 5.37 ಕಿ.ಮೀ.
ಸ್ವಾಮಿ ವಿವೇಕಾನಂದ ರಸ್ತೆಯಿಂದ ಟ್ರಿನಿಟಿ ಚರ್ಚ್ ರಸ್ತೆ: 1.98 ಕಿ.ಮೀ.
ಡಿ.ಭಾಸ್ಕರನ್ ರಸ್ತೆಯಿಂದ ಎಸಿಎಸ್ ಜಂಕ್ಷನ್: 647.32 ಮೀ.
ಎಸ್ಇಎಸ್ ಜಂಕ್ಷನ್ನಿಂದ ದೊಮ್ಮಲೂರು: 2.53 ಕಿ.ಮೀ.
ಹೊರವರ್ತುಲ ರಸ್ತೆ: 16.92 ಕಿ.ಮೀ.