ಜಿಲ್ಲೆ

ಐಒಸಿಎಲ್‌ ಡೀಲರ್‌ ಶಿಪ್‌ ಕೊಡಿಸುವುದಾಗಿ 17 ಲಕ್ಷ ರೂ.ವಂಚನೆ

Uttara Kannada - Subash Hegde

ಕಾರವಾರ: ಇಂಡಿಯನ್ ಆಯ್ಲ್ ಕಾರ್ಪೋರೇಶನ್ ಡೀಲರ್ ಶಿಪ್ ಕೊಡುವುದಾಗಿ ನಕಲಿ ವೆಬ್‌ಸೈಟ್, ದಾಖಲೆ ಸೃಷ್ಟಿಸಿ ಶಿರಸಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿ ರಸ್ತೆಯ ದೇವಿದಾಸ ವೀರಪ್ಪ ಪಾಲೇಕರ್ ಅವರು ತಮ್ಮ ಪುತ್ರ ಎಸ್.ಡಿ.ಸಂಕೇತ ಅವರ ಹೆಸರಿನಲ್ಲಿ ಇಂಡಿಯನ್ ಆಯ್ಲ್ ಡೀಲರ್ ಶಿಪ್ ಪಡೆಯಲು ಮುಂದಾಗಿ 17.24 ಲಕ್ಷ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ.

ಇದನ್ನೂ ಓದಿ: ನಡತೆ ಶಂಕಿಸಿ ಸಂಬಂಧಿಯನ್ನೇ ಕೊಂದವರು ಅಂದರ್
info@iocll.in ಎಂಬ ವೆಬ್‌ಸೈಟ್ ನೋಡಿ ಅದರಲ್ಲಿ ಡೀಲರ್ ಶಿಪ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಕೆಲ ದಿನಗಳ ನಂತರ ಕರೆ ಮಾಡಿದ ಅಭಿಷೇಕ ಮಂಡಲ ಎಂಬ ವ್ಯಕ್ತಿ. ಡೀಲರ್‌ಶಿಪ್ ಮಂಜೂರಾಗಿದೆ ಎಂದು ನಂಬಿಕೆ ಬರುವಂತೆ ದಾಖಲೆಗಳನ್ನು ಕಳಿಸಿದ್ದ ನಂತರ ಹಂತ ಹಂತವಾಗಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಂಡ ಎಂದು ಅವರು ದೂರಿದ್ದಾರೆ.