ಜಿಲ್ಲೆ

ನಗುಮೊಗದ ಸೇವೆಯಿಂದ ಬ್ಯಾಂಕ್ ಅಭಿವೃದ್ಧಿ : ಕುಬೆವೂರು ಮುರಳೀಧರ ಭಂಡಾರಿ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಗ್ರಾಮೀಣ ವಲಯದಲ್ಲಿ ಗ್ರಾಹಕರಿಗೆ ನೀಡಲಾಗುವ ನಗುಮೊಗದ ಸೇವೆಯಿಂದ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು ಮೂಲ್ಕಿ ಶಾಖೆ ನೀಡುವ ಸೇವೆ ಸದಾ ಅಭಿನಂದನೀಯ ಎಂದು ಹಿರಿಯ ಗ್ರಾಹಕ ಕುಬೆವೂರು ಮುರಳೀಧರ ಭಂಡಾರಿ ಹೇಳಿದರು.

ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖೆಯಲ್ಲಿ ನಡೆದ 118ನೇ ಸಂಸ್ಥಾಪಕರ ದಿನಾಚರಣೆ ಸಂದರ್ಭ ಗ್ರಾಹಕ ಸಭೆಯಲ್ಲಿ ಮಾತನಾಡಿದರು.

ಮೂಲ್ಕಿ ನಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ. ಮಾತನಾಡಿ, ವಿಜಯಾ ಬ್ಯಾಂಕ್ ಸಂಸ್ಥಾಪಕ ಹಾಗೂ ಬ್ಯಾಂಕಿಂಗ್ ವಲಯದ ಮೇರುವ್ಯಕ್ತಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ನೆನಪಿಗಾಗಿ ಅವರ ಭಾವಚಿತ್ರವನ್ನು ಮೂಲ್ಕಿ ಶಾಖೆಯಲ್ಲಿ ಇರಿಸುವ ವ್ಯವಸ್ಥೆ ಮಾಡಬೇಕು ಎಂದರು.

ಎ.ಡಿ ಪೂಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ಗ್ರಾಹಕರಾದ ರಾಮಚಂದ್ರ ಶೆಣೈ, ಹರಿಶ್ಚಂದ್ರ ಪಿ.ಸಾಲ್ಯಾನ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಪ್ರಬಂಧಕ ನಾರಾಯಣ ಶೆಣೈ, ಕಕ್ವಗುತ್ತು ಭಾನುಮತಿ ಶೆಟ್ಟಿ, ಹರೀಶ್ ಪುತ್ರನ್ ಮತ್ತಿತರರು ಮಾತನಾಡಿದರು. ಬ್ಯಾಂಕ್ ಪ್ರಬಂಧಕ ಸಚಿನ್ ಹೆಗ್ಡೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.