Gavel on desk. Isolated with good copy space. Dramatic lighting. 
ಜಿಲ್ಲೆ

ವಿಮಾ ಕ್ಲೈಮ್‌ ತಿರಸ್ಕರಿಸಿದ ಕಂಪನಿಗೆ ಗ್ರಾಹಕರ ಆಯೋಗದಿಂದ 4 ಲಕ್ಷ ರೂ.ದಂಡ

Uttara Kannada - Subash Hegde

ಕಾರವಾರ: ವಿಮಾ ಕ್ಲೈಮ್‌ ತಿರಸ್ಕರಿಸಿದ ಕಂಪನಿಯೊಂದಕ್ಕೆ 4 ಲಕ್ಷ ರೂ. ದಂಡ ವಿಧಿಸಿ ರಾಜ್ಯ ಗ್ರಾಹಕರ ರಕ್ಷಣಾ ಆಯೋಗ ಆದೇಶ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.
ಕುಮಟಾ ತಾಲೂಕಿನ ತಲಗೊಡ ಗ್ರಾಮದ ವೀಣಾ ಎಂಬುವವರ ತಾಯಿ ವಿಮಾ ಕಂಪನಿಯಿಂದ ಅಪಘಾತ ಸುರಕ್ಷಾ ಪಾಲಿಸಿ ಯನ್ನು 2012 ರಲ್ಲಿ ತೆಗೆದುಕೊಂಡಿದ್ದರು. 2018 ರ ಸೆಪ್ಟಂಬರ್ ತಿಂಗಳಲ್ಲಿ ಅವರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಆದರೆ, ಅವರ ವಾರಸುದಾರರಿಗೆ ವಿಮಾ ಕಂಪನಿ ಪರಿಹಾರ ನೀಡಿರಲಿಲ್ಲ. ಮೃತರ ಸಾವು ಆಕಸ್ಮಿಕವಲ್ಲ. ಮೃತರು ತಮ್ಮ ಪೂರ್ವ ಆರೋಗ್ಯದ ಸಮಸ್ಯೆಯನ್ನು ಮುಚ್ಚಿಟ್ಟಿದ್ದರು ಎಂದು ವಿಮಾ ಕಂಪನಿಯು ಕ್ಲೈಮು ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ವಾರಸುದಾರರು ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಕೊಟ್ಟಿದ್ದರು. ಜಿಲ್ಲಾ ಆಯೋಗವು ವಿಮಾ ಕಂಪನಿಗೆ ಕ್ರೈಮ್ ಮೊತ್ತ 45 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿತ್ತು. ಆದರೆ, ಕಂಪನಿ ರಾಜ್ಯ ಆಯೋಗಕ್ಕೆ ಮೇಲ್ಮನವಿ ಸ್ಲಲಿಸಿತ್ತು.
ಆಯೋಗದ ಸದಸ್ಯರಾದ ರವಿಶಂಕರ್ ಹಾಗೂ ಸುನಿತಾ ಬಾಗೇವಾಡಿ ವಿಚಾರಣೆ ನಡೆಸಿ, ಜಿಲ್ಲಾ ಆಯೋಗದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ. ಮಾತ್ರವಲ್ಲ ಸೇವಾ ನ್ಯೂನತೆಗಾಗಿ ಕಂಪನಿಗೆ 4 ಲಕ್ಷ ರೂ. ದಂಡ ವಿಽಸಿದ್ದಾರೆ. 12 ಅಡಿಗಳಿಂದ ಬಿದ್ದದ್ದೇ ಸಾವಿಗೆ ಪ್ರಾಥಮಿಕ ಕಾರಣ ಮತ್ತು ವೈದ್ಯರು ವೈದ್ಯಕೀಯ ಪರಿಭಾಷೆಯಲ್ಲಿ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ ಮತ್ತು ಅದು ಸಾವಿಗೆ ಪ್ರಾಥಮಿಕ ಕಾರಣವಲ್ಲ ಎಂಬ ಗ್ರಾಹಕರ ವಾದವನ್ನು ಪುರಸ್ಕರಿಸಿದ್ದಾರೆ. ಗ್ರಾಹಕರ ಪರವಾಗಿ ಹೈಕೋರ್ಟ್ ವಕೀಲ ಪ್ರಶಾಂತ ಟಿ.ಪಂಡಿತ ವಾದ ಮಂಡಿಸಿದ್ದರು.