ಕುಂದಾಪುರ: ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎಸ್‌ಎಸ್‌ಎಲ್ ಇಂಡಿಯಾ ಇವರು ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತ ಮತ್ತು ಜರ್ಮನಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಬುಧವಾರ ನಡೆಯಿತು.
ಜರ್ಮನ್ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಆಹಾರ, ಕಲೆ ವಿಚಾರ ವಿನಿಮಯ ವಾಡಿಕೊಂಡರು.
ಎಫ್.ಎಸ್.ಎಲ್ ಇಂಡಿಯಾ ಇದರ ಉಪನಿರ್ದೇಶಕ ರಾಗ್ಲ್ಯಾಂಡ್ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಎಫ್.ಎಸ್.ಎಲ್ ಇಂಡಿಯಾ ಇದರ ಮುಖ್ಯ ಸಂಯೋಜಕಿ ನಾಗರತ್ನ, ಎಲ್.ಟಿ.ವಿ ವಿಭಾಗದ ದಿನೇಶ್ ಮತ್ತು ಶರಣ್ ಪೌಲ್ ವಿವಿಧ ಚಟುವಟಿಕೆಗಳನ್ನು ವಾಡಿಸಿದರು.
ರೇಡಿಯೋ ಕುಂದಾಪ್ರದ ನಿರೂಪಕಿ ಜ್ಯೋತಿ ಸಾಲಿಗ್ರಾಮ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ನಾಯ್ಕ ನಿರೂಪಿಸಿ, ವಂದಿಸಿದರು.