ಓಣಂ ಹಬ್ಬಕ್ಕಾಗಿ ಚೆಂಡುಮಲ್ಲಿಗೆ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡ ಕಾಞಂಗಾಡಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳು. 
ಜಿಲ್ಲೆ

ಓಣಂ ಹಬ್ಬಕ್ಕೆ ಚೆಂಡುಮಲ್ಲಿಗೆ ಕೃಷಿ : ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳಿಂದ ಭರದ ಸಿದ್ಧತೆ

ಕಾಸರಗೋಡು: ಹೂವಿನ ಹಬ್ಬ ಓಣಂಗೆ ಹೂವಿನಲ್ಲಿ ಸ್ವಾವಲಂಬಿಗಳಾಗಲು ಕಾಞಂಗಾಡಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳು ಶಾಲಾ ವಠಾರದಲ್ಲಿ ಚೆಂಡುಮಲ್ಲಿಗೆ ಹೂವಿನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸ್ವಾವಲಂಬಿ ಹಾಗೂ ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳು ಶಾಲಾ ಆವರಣದಲ್ಲಿ ಚೆಂಡುಮಲ್ಲಿಗೆ ಸಸಿಗಳನ್ನು ನೆಡುವ ಮೂಲಕ ಚೆಂಡುಮಲ್ಲಿಗೆ ಕೃಷಿಗೆ ಚಾಲನೆ ನೀಡಿದರು. ಕಾಸರಗೋಡು ಕುಟುಂಬಶ್ರೀ ಮಿಷನ್ ಫಾರ್ಮ್ ಲೈವ್ಲಿಹುಡ್ ಬ್ಲಾಕ್ ಸಂಯೋಜಕಿ ಎ.ರಜನಿ ಆಲುವಾದಿಂದ ಚೆಂಡುಮಲ್ಲಿಗೆ ಹೂವನ್ನು ಕಾಞಂಗಾಡಿಗೆ ತಲುಪಿಸಿದ್ದಾರೆ. ಕಾಞಂಗಾಡ್ ಕೃಷಿ ಅಧಿಕಾರಿ ಕೆ.ಮುರಳೀಧರನ್, ಕೃಷಿ ಸಹಾಯಕ ರಂಜಿತ್ ಟಿ.ಕೆ., ಹೊಸದುರ್ಗ ಬಿ.ಆರ್.ಸಿ. ಅನುಭವಿ ಶಿಕ್ಷಕಿ ಪ್ರಸನ್ನ ಕುಮಾರಿ ಕೃಷಿಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.

ನೂರೈವತ್ತು ಚೆಂಡುಮಲ್ಲಿಗೆ ಸಸಿಗಳನ್ನು ಶಾಲಾ ಆವರಣ ಹಾಗೂ ಗ್ರೋ ಬ್ಯಾಗ್‌ಗಳಲ್ಲಿ ನೆಡಲಾಯಿತು. ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು, ಮುಖ್ಯಶಿಕ್ಷಕ ರಾಜೇಶ್ ಎಂ.ಪಿ., ಪೊಲೀಸ್ ಅಧಿಕಾರಿಗಳು ಪಿಟಿಎ, ಎಸ್‌ಎಂಸಿ ಪ್ರತಿನಿಧಿಗಳು, ಶಿಕ್ಷಕರು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಸಮುದಾಯ ಪೊಲೀಸ್ ಅಧಿಕಾರಿಗಳಾದ ವಹೀದತ್ ಟಿ., ಸಿಂಧು ಟಿಟಿವಿ ನೇತೃತ್ವ ವಹಿಸಿದ್ದರು.