ಮುದಗಲ್ ಸಮೀಪದ ಕೆ.ಮಾರಿಯಮ್ಮ ಹಳ್ಳಿಯಲ್ಲಿ ಗುಡ್‌ಫ್ರೈಡೆ ನಿಮಿತ್ತ ಕ್ರಿಸ್ತರ ಪವಾಡಗಳನ್ನು ನಾಟಕ ರೂಪಕದಲ್ಲಿ ಪ್ರದರ್ಶಿಸಿದರು. 
ಜಿಲ್ಲೆ

ಶಿಲುಬೆ ಮೆರವಣಿಗೆ ಅದ್ದೂರಿ

Kopala - Desk - Eraveni

ಮುದಗಲ್: ಪಟ್ಟಣದಲ್ಲಿ ಗುಡ್ ಫ್ರೈಡೇ ನಿಮಿತ್ತ ಶುಕ್ರವಾರ ಚರ್ಚ್ ನಿಂದ ಕಾಡ ಚಿನ್ನಪ್ಪನವರ ಗುಡ್ಡದವರೆಗೆ ಶಿಲುಬೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಸಮೀಪದ ಕೆ.ಮಾರಿಯಮ್ಮ ಹಳ್ಳಿಯಲ್ಲಿ ಗುಡ್ ಫ್ರೈಡೇ ನಿಮಿತ್ತ ಜೆಎಂಜೆ ಆಂಗ್ಲ ಮಾಧ್ಯಮ ಶಾಲೆಯಿಂದ ಆರೋಗ್ಯ ಮಾತೆ ದೇವಾಲಯದವರಗೆ ಯೇಸುವಿನ ಪವಾಡಗಳನ್ನು ನಾಟಕ ರೂಪಕ ಪ್ರದರ್ಶಿಸುತ್ತಾ, ಯೇಸುವಿನ ಶ್ಲೋಕವನ್ನು ಧ್ಯಾನಿಸಿದರು. ಚರ್ಚ್ ಫಾದರ್‌ಗಳಾದ ದಾನಪ್ಪ, ಸುನೀಲ್, ಪನ್ನೀಸ್ವಾಮಿ, ಆಲ್ಬರ್ಟ್ ಡಿಸಿಲ್ವಾ ಇದ್ದರು.