ಜಿಲ್ಲೆ

ರಸ್ತೆಯಲ್ಲೇ ತಲೆ ಕಡಿದು ವ್ಯಕ್ತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ವಾಯುವಿಹಾರಿಗಳು!

ದಾವಣಗೆರೆ: ರಸ್ತೆಬದಿಯಲ್ಲೇ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಜಗಳೂರು ತಾಲೂಕಿನ ಅಶ್ವತ್ಥರೆಡ್ಡಿ ನಗರ ಸಮೀಪದ ಬಿದರಕೆರೆ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಎಗ್​ರೈಸ್ ವ್ಯಾಪಾರಿ ಬಸವರಾಜ(45) ಭೀಕರವಾಗಿ ಕೊಲೆಯಾದವ. ಗೋಪಗೊಂಡನಹಳ್ಳಿ ಸಮೀಪದಲ್ಲಿರುವ ಹೊಲಕ್ಕೆಂದು ಬುಧವಾರ ಬೆಳಗಿನ ಜಾವ ಬಸವರಾಜ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಶವ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ವಾಯುವಿಹಾರಕ್ಕೆ ಹೋದ ಸಾರ್ವಜನಿಕರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ದುರ್ಗಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶವದ ಪಕ್ಕದಲ್ಲಿ ವಾಹನ ಚಾಲಕರು ಧರಿಸುವ ಖಾಕಿ ಮೇಲಂಗಿ ಪತ್ತೆಯಾಗಿದೆ. ಕೊಲೆಗೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ.