ಸಾಂದರ್ಭಿಕ ಚಿತ್ರ 
ಜಿಲ್ಲೆ

ಕಟ್ಟಿಹಾಕಿದ್ದ ಕರು ವನ್ಯಮೃಗಕ್ಕೆ ಬಲಿ

ಸೌಮ್ಯ ಆರ್

ಕಾಸರಗೋಡು: ಮುಳಿಯಾರು ಪಂಚಾಯಿತಿಯ ಬೋವಿಕ್ಕಾನ ಆಸುಪಾಸು ಚಿರತೆ ಸಂಚಾರದ ವದಂತಿ ಹೆಚ್ಚಾಗುತ್ತಿರುವ ಮಧ್ಯೆ, ಮುಳಿಯಾರು ಸೇತುವೆ ಸನಿಹದ ನಿವಾಸಿ ಅಬ್ದುಲ್ಲಕುಞಿ ಎಂಬುವರ ಮನೆ ಬಳಿ ಹಟ್ಟಿಯಲ್ಲಿ ಬಿಗಿಯಲಾಗಿದ್ದ ಕರು ಒಂದನ್ನು ವನ್ಯಮೃಗವೊಂದು ಕಚ್ಚಿಕೊಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ, ಪಶುಸಂಗೋಪನಾ ಇಲಾಖೆ ವೈದ್ಯರ ಸಹಾಯದಿಂದ ಕಳೇಬರ ಪರಿಶೀಲಿಸಿದಾಗ ಚಿರತೆ ಕಡಿದ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ವೆಟರಿನರಿ ಸರ್ಜನ್ ಡಾ.ಅತುಲ್‌ಗಣೇಶ್ ಮಹಜರು ನಡೆಸಿದ್ದಾರೆ. ಬೀದಿನಾಯಿಗಳು ದಾಳಿ ನಡೆಸಿ ಕೊಂದುಹಾಕಿರುವ ಸಾಧ್ಯತೆಯಿರುವುದಾಗಿ ಸಂಶಯಿಸಲಾಗಿದೆ. ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಕಂಡುಬಂದಿರುವುದಾಗಿ ವ್ಯಾಪಕ ವದಂತಿ ಹಬ್ಬಿದ್ದರೂ, ಅರಣ್ಯಾಧಿಕಾರಿಗಳು ಇದನ್ನು ದೃಢಪಡಿಸಿಲ್ಲ.