ಬಾದಾಮಿಯಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ಕಾನಿಪ ಸಂಘದ ಭವನದಲ್ಲಿ ಇಲಾಖೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆ ನಡೆಯಿತು. ಕಾನಿಪ ಸಂಘದ ಅಧ್ಯಕ್ಷ ಅಡಿವೇಂದ್ರ ಇನಾಮದಾರ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಚಿನಿವಾಲರ, ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಂ.ಕೆ. ಪಟ್ಟಣಶೆಟ್ಟಿ ಇತರರಿದ್ದರು. 
ಜಿಲ್ಲೆ

ನಾಳೆ ಬಾದಾಮಿಯಲ್ಲಿ ಕ್ರಿಕೆಟ್ ಪಂದ್ಯಾವಳಿ

ಗಿರೀಶ ಸಗರ

ಬಾದಾಮಿ : ನಗರದ ಶ್ರೀ ವೀರಪುಲಿಕೇಶಿ ವಿದ್ಯಾ ಸಂಸ್ಥೆ ಮೈದಾನದಲ್ಲಿ ಜು.22 ಮತ್ತು 23 ರಂದು ಎರಡು ದಿನಗಳವರೆಗೆ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ನೌಕರರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕಾನಿಪ ಸಂಘದ ಅಧ್ಯಕ್ಷ ಅಡಿವೇಂದ್ರ ಇನಾಮದಾರ ತಿಳಿಸಿದರು.

ಕಾನಿಪ ಸಂಘದ ಭವನದಲ್ಲಿ ಇಲಾಖೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, 22 ರಂದು ಬೆಳಗ್ಗೆ 10 ಗಂಟೆಗೆ ಸಂಸದ ಪಿ.ಸಿ.ಗದ್ದಿಗೌಡರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಕ್ರೀಡೆಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಂ.ಕೆ. ಪಟ್ಟಣಶೆಟ್ಟಿ, ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ, ತಹಸೀಲ್ದಾರ್ ಜೆ.ಬಿ.

ಮಜ್ಜಗಿ, ಕಾನಿಪ ಸಂಘದ ರಾಜ್ಯ ಸದಸ್ಯ ಮಹೇಶ ಅಂಗಡಿ, ಜಿಲ್ಲಾಧ್ಯಕ್ಷ ಆನಂದ ದಲಭಂಜನ್, ಕಾರ್ಯದರ್ಶಿ ಶಂಕರ ಕಲ್ಯಾಣಿ, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ. ಹಿರೇಮಠ ಆಗಮಿಸುವರು. ಸಿಪಿಐ ಡಿ.ಡಿ. ಧೂಳಖೇಡ, ಪಿಎಸ್‌ಐ ನಿಂಗಪ್ಪ ಪೂಜಾರಿ, ಟಿಎಚ್‌ಒ ಡಾ. ಎಂ.ಬಿ. ಪಾಟೀಲ, ಬಿಇಒ ಆರೀಫ್ ಬಿರಾದಾರ, ಪುರಸಭೆ ಸದಸ್ಯ ನಾಗರಾಜ ಕಾಚಟ್ಟಿ, ವಕೀಲರ ಸಂಘದ ಅಧ್ಯಕ್ಷ ವಿ.ಡಿ. ದೊಡ್ಡಪತ್ತಾರ, ತಪಾಸಕ ಎಸ್.ಬಿ. ಕೊಡತಗೇರಿ ಉಪಸ್ಥಿತರಿವರು ಎಂದರು.

ಪ್ರಧಾನ ಕಾರ್ಯದರ್ಶಿ ಲಿಂಗರಾಜ ಚಿನಿವಾಲರ ಮಾತನಾಡಿ, ಜು.23 ರಂದು ಮಧ್ಯಾಹ್ನ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಕ್ರಿಕೆಟ್ ತಂಡದ ಮುಖ್ಯಸ್ಥ ಅಪರಾಧ ವಿಭಾಗದ ಪಿಎಸ್‌ಐ ವಿಠ್ಠಲ ನಾಯಕ, ಶಿರಸ್ತೇದಾರ್ ವಿದ್ಯಾನಂದ ಜಾಧವ, ಉಮೇಶ ಭಿಕ್ಷಾವತಿಮಠ, ಅಧಿಕಾರಿಗಳಾದ ಸುಭಾಷ ಅವರಾದಿ, ವಿನೋದ ಹೊಸೂರ, ಶಂಕರ ಕುದರಿಮನಿ ಇತರರಿದ್ದರು.

ಭಾಗವಹಿಸುವ ತಂಡಗಳು : ಕಾರ್ಯನಿರತ ಪತ್ರಕರ್ತರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಭೂಮಾಪನಾ ಇಲಾಖೆ, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ.