ಕನಕಗಿರಿ: ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಅಡಿ ಗಾರೆ ಕೆಲಸ ತರಬೇತಿ ಕಾರ್ಯಾಗಾರ ನಡೆಸಿ, ತರಬೇತಿ ಪಡೆದವರಿಂದಲೇ ತಾಲೂಕಿನ ಗೌರಿಪುರದಲ್ಲಿ ನಿರ್ಮಿಸಲಾದ ಮಾದರಿ ಮನೆಗಳು 6 ತಿಂಗಳಲ್ಲೇ ಬಿರುಕು ಬಿಟ್ಟಿದ್ದು, ಅನಾಥವಾಗಿ ಬಿದ್ದಿವೆ.
ಇದನ್ನೂ ಓದಿ:ನೀವು ಬಿರುಕು ಬಿಟ್ಟ ಪಾದಗಳಿಂದ ಬಳಲುತ್ತಿದ್ದೀರಾ? ಪಾದಗಳನ್ನು ಮೃದುಗೊಳಿಸಲು ಹೀಗೆ ಮಾಡಿ ಸಾಕು.. Dry Feet
ರಾಜ್ಯದ 132 ತಾಲೂಕಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)ಅಡಿ ಇಂತಿಷ್ಟು ಆಸಕ್ತ ನಿರುದ್ಯೋಗಿಗಳಿಗೆ ತರಬೇತಿ ನೀಡಲು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಿಂದ ಶಿವಶಕ್ತಿ ಮಹಿಳಾ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದೊಂದಿಗೆ ಕರಾರು ಮಾಡಿಕೊಳ್ಳಲಾಗಿತ್ತು.
ಅದರಂತೆ ತಾಲೂಕು ವ್ಯಾಪ್ತಿಯಲ್ಲಿ ಗುತ್ತಿಗೆ ಪಡೆದ ಸಂಘದಿಂದ 60 ಸದಸ್ಯರಿಗೆ ತರಬೇತಿ ನೀಡಲಾಗಿದೆ ಎನ್ನಲಾಗಿದೆ. ತರಬೇತಿ ಪಡೆದವರಿಂದ ಎರಡು ಮಾದರಿ ಮನೆಗಳನ್ನು ನಿರ್ಮಿಸಬೇಕಿದ್ದು, ತಲಾ 1.40 ಲಕ್ಷ ರೂ. ನಿಗದಿಪಡಿಸಿತ್ತು. ಅದರಂತೆ ತಾಲೂಕಿನ ಗೌರಿಪುರದಲ್ಲಿ ಸ್ಥಳ ನಿಗದಿಪಡಿಸಿ ಮನೆ ನಿರ್ಮಿಸಲಾಗಿದ್ದು, 6 ತಿಂಗಳಲ್ಲೇ ಬಿರುಕು ಬಿಟ್ಟಿವೆ.
ಈ ಮನೆಯಲ್ಲಿ ಕೂಸಿನ ಮನೆ ಆರಂಭಿಸಲು ಗ್ರಾಪಂ ಮುಂದಾಗಿದ್ದು, ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಪಾಳು ಬಿದ್ದಿವೆ. ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿವೆ. ಇತ್ತೀಚೆಗೆ ಜಿಪಂ ಪಿಡಿ ಪ್ರಕಾಶ ವಡ್ಡರ್ ಭೇಟಿ ನೀಡಿ ವಿಕ್ಷೀಸಿ ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕಿದೆ.