ಕಾರ್ಕಳ: ನಿಟ್ಟೆ ಗ್ರಾಮದ ಪಾರೊಟ್ಟುವಿನಲ್ಲಿ ಶನಿವಾರ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಹಸುಗಳು ಮೃತಪಟ್ಟಿವೆ. ಪಾರೊಟ್ಟು ನಿವಾಸಿ ಸುಜಾತ ಅವರಿಗೆ ಸೇರಿದ ಹಸುಗಳು ಬಯಲಿನಲ್ಲಿ ಮೇಯುತ್ತಿದ್ದ ಸಂದರ್ಭ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿವೆ. ಮೆಸ್ಕಾಂ ಎಇ ಸುಧೀಂದ್ರ, ಎಇಇ ವಿನಯ ಕಾಮತ್, ಪಶು ವೈದ್ಯ ಡಾ.ಅರುಣ್, ಗ್ರಾ.ಪಂ ಸದಸ್ಯ ಸತೀಶ್, ರಶ್ಮಿ ಶೆಟ್ಟಿ, ಗ್ರಾಮಕರಣಿಕ ಸುಖೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.