ಬ್ರಹ್ಮಾವರ: ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಹುಲ್ಲು ಮೇವು ತಿನ್ನುತ್ತಿದ್ದ ಹಸುವೊಂದಕ್ಕೆ ಬುಧವಾರ ಸಂಜೆ ಬಸ್ ಡಿಕ್ಕಿ ಹೊಡೆದಿದ್ದು, ಹಸು ತೀರಾ ಗಂಭಿರ ಸ್ಥಿತಿಯಲ್ಲಿರುವುದನ್ನು ಕಂಡು ತಕ್ಷಣ ಪರಿಸರ ಸ್ಪಂದಿಸಿ ಚಿಕಿತ್ಸೆಗೊಳಪಡಿಸಿದ್ದಾರೆ. ಸ್ಥಳದಲ್ಲಿದ್ದ ವಾರಂಬಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ದೇವಾನಂದ ನಾಯಕ್, ಯುವಕರು ಸ್ಪಂದಿಸಿದರು. ಸ್ಥಳೀಯ ನಿವೃತ್ತ ಪಶುವೈದ್ಯಾಧಿಕಾರಿ ಮಹೇಶ್ ಶೆಟ್ಟಿ ಮತ್ತು ಡಾ.ಪ್ರದೀಪ್ ಸ್ಥಳಕ್ಕೆ ಆಗಮಿಸಿ ಗೋವಿಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಹಸು ಬದುಕುಳಿದಿದೆ. ಸ್ಥಳಿಯರಾದ ಅರ್ಜುನ್ ಪ್ರಭು, ಸತ್ಯರಾಜ್ ಬಿರ್ತಿ, ಪ್ರಸಾದ್ ವಾರಂಬಳ್ಳಿ ಅನೇಕರು ಸಹಕರಿಸಿದ್ದರು.