ಬಾಗಲಕೋಟೆ: ಕರೊನಾ ಸೋಂಕು ಹರಡುವಿಕೆಯ ವಿಚಾರದಲ್ಲಿ ಬಾಗಲಕೋಟೆ ಹಾಟ್ಸ್ಪಾಟ್ ಎನಿಸಿಕೊಂಡಿದೆ. ನಗರದಲ್ಲೇ 11 ಜನರಿಗೆ ಸೋಂಕು ಪತ್ತೆಯಾಗಿದ್ದು, ಈ ಕುರಿತಾಗಿ ಶಾಸಕ ವೀರಣ್ಣ ಚರಂತಿ ಮಠ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿದ್ದರು. ಜಿಲ್ಲೆಯ ಸ್ಥಿತಿಗತಿ ಕುರಿತ ವಿಚಾರಗಳನ್ನು ಅವರ ಜತೆಗೆ ಚರ್ಚಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 14 ಜನರಿಗೆ ಕರೊನಾ ಸೋಂಕು ಪಾಸಿಟಿವ್ ಆಗಿದ್ದು, ಒಂದು ಸಾವು ಸಂಭವಿಸಿದೆ. ಬಾಗಲಕೋಟೆ ನಗರದಲ್ಲಿ 11, ಮುಧೋಳ ತಾಲೂಕಿನಲ್ಲಿ 3 ಪ್ರಕರಣಗಳಿವೆ. ಆದಾಗ್ಯೂ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಶಾಸಕ ಚರಂತಿಮಠ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಒಂದೇ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದಂತೆ ಲಾಕ್ಡೌನ್ ನಿಯಮ ಪಾಲನೆ, ಕ್ವಾರಂಟೈನ್ ಎಲ್ಲದರ ಮೇಲೂ ಜಿಲ್ಲಾಡಳಿತ ನಿಗಾವಹಿಸಿದೆ ಎಂದು ಅವರು ತಿಳಿಸಿದ್ದಾರೆ.