Bengaluru: ಕಾರಿನಲ್ಲಿ ಹೋಗುತ್ತಿರುವಾಗ ದಂಪತಿ ಸನ್‌ರೂಫ್ ತೆಗೆದು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ಮಂಗಳವಾರ (ಮೇ.27) ನಡೆದಿದೆ.
ರಾತ್ರಿ ದಂಪತಿ ಊಟ ಮುಗಿಸಿ ಮನೆಗೆ ಹೊರಟಿದ್ದ ದಂಪತಿಗಳು ಕಾರಿನ ಸನ್‌ರೂಪ್ ತೆಗೆದು ರೊಮ್ಯಾನ್ಸ್ ಮಾಡಿದ್ದು, ದಂಪತಿಗಳ ಈ ವರ್ತನೆಯನ್ನು ಅವರ ಕಾರನ್ನು ಹಿಂಬಾಲಿಸಿದ ಸವಾರನೊಬ್ಬರು ವಿಡಿಯೋ ಮಾಡಿ, ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅಜಾಗರೂಕ ಚಾಲನೆ ಮತ್ತು ಸಾರ್ವಜನಿಕ ಅಸಭ್ಯತೆಗಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಕಾರಿನ ನಂಬರ್ ಆಧಾರಿಸಿ ಹಲಸೂರು ಪೊಲೀಸರು ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಅಜಾಗರೂಕರಾಗಿ ಕಾರು ಚಲಾಯಿಸಿದ್ದಕ್ಕೆ 1,000 ರೂ. ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 500 ರೂ. ದಂಡವನ್ನು ಪೊಲೀಸರು ದಂಪತಿಗಳಿಗೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)