ಜಿಲ್ಲೆ

ಕರ್ನಾಟಕದಲ್ಲಿ 144ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಈವರೆಗೆ ನಾಲ್ವರು ಸಾವು, ಒಂದೇ ದಿನ 16 ಪ್ರಕರಣ ಬೆಳಕಿಗೆ

ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್‌ ಸೋಂಕಿತರ ಸಂಖ್ಯೆ 144ಕ್ಕೇರಿದ್ದು, ಒಂದೇ ದಿನ 16 ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ. ಇಲ್ಲಿಯವರೆಗೆ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿದ್ದು, 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 55, ಮೈಸೂರು 28, ದಕ್ಷಿಣ ಕನ್ನಡ 12, ಉತ್ತರ ಕನ್ನಡ 8, ಚಿಕ್ಕಬಳ್ಳಾಪುರ 7, ಕಲಬುರಗಿ 5, ಬಳ್ಳಾರಿ 5, ದಾವಣಗೆರೆ 3, ಉಡುಪಿ 3, ಧಾರವಾಡ 1, ಕೊಡಗು 1, ತುಮಕೂರು 1, ಬೀದರ್​ನಲ್ಲಿ 10, ಬಾಗಲಕೋಟೆ 1, ಬೆಳಗಾವಿ 3 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಬೆಂಗಳೂರಿನಲ್ಲಿ 9 ಮತ್ತು ಕಲಬುರಗಿಯಲ್ಲಿ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಕರೊನಾ ವೈರಸ್‌ ನಿಯಂತ್ರಣಕ್ಕೆ ಸ್ವ-ಇಚ್ಛೆಯಿಂದ ಟೆಲಿಮೆಡಿಸಿನ್‌ ಮುಖಾಂತರ ಸೇವೆ ಸಲ್ಲಿಸಲು ಬಯಸುವ ವೈದ್ಯರಿಗೆ ದೂರವಾಣಿ ಸಂಖ್ಯೆ 080 47192219ಗೆ ಮಿಸ್ಡ್‌ ಕಾಲ್‌ ನೀಡಲು ಅಥವಾ https://forms.gle/TPbU7eZgazdxG9gS9 ವೆಬ್‌ಸೈಟ್‌ ಮೂಲಕ ಸರ್ಕಾರಕ್ಕೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್​-19 ಸಂಬಂಧಿತ ಎಲ್ಲಾ ರೀತಿಯ ಅನುಮಾನಗಳಿಗೆ ಕರೊನಾ ವೈರಸ್‌ ಸಹಾಯವಾಣಿ ಸಂಖ್ಯೆ 104 ಹಾಗೂ ಹೊಸ ಸಂಖ್ಯೆ 9745697456 ಅನ್ನು ಸಂಪರ್ಕಿಸಬಹುದಾಗಿದೆ.