More

    ಭಾನುವಾರ ಏಕತೆಯ ದೀಪ ಹಚ್ಚುವಾಗ ಫ್ಯಾನ್​, ಫ್ರಿಜ್​ ಅನ್ನು ಆಫ್​ ಮಾಡಬಾರದು, ಏಕೆ ಗೊತ್ತಾ?

    ನವದೆಹಲಿ: ಕೋವಿಡ್​ 19 ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದ್ದು, ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪಗಳನ್ನು ಆಫ್​ ಮಾಡಿ, ಎಣ್ಣೆದೀಪಗಳನ್ನು, ಮೊಂಬತ್ತಿಗಳು, ಮೊಬೈಲ್​ಫೋನ್​ನ ಫ್ಲ್ಯಾಶ್​ಲೈಟ್​ಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ರಾತ್ರಿ ವೇಳೆ ಒಮ್ಮೆಲೆ ಎಲ್ಲ ದೀಪಗಳನ್ನು ಆರಿಸುವುದರಿಂದ ವಿದ್ಯುತ್​ ಉತ್ಪಾದನಾ ಕೇಂದ್ರಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ದೀಪಗಳನ್ನು ಮಾತ್ರ ಆರಿಸಿ, ಫ್ರಿಜ್​, ಟಿವಿ, ಕಂಪ್ಯೂಟರ್​, ಫ್ಯಾನ್​ಗಳನ್ನು ಎಂದಿನಂತೆ ಉರಿಸಬೇಕು ಎಂದು ವಿದ್ಯುತ್​ ನಿಗಮಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿವೆ.

    ರಾತ್ರಿ ವೇಳೆ ವಿದ್ಯುತ್​ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯುತ್​ ಸರಬರಾಜು ನಿಗಮಗಳು ವಿದ್ಯುತ್​ ಪೂರೈಕೆ ಪ್ರಮಾಣವನ್ನು ಹೆಚ್ಚಿಸಿರುತ್ತವೆ. ಒಮ್ಮೆಲೇ ಎಲ್ಲ ವಿದ್ಯುತ್​ ಉಪಕಣಗಳ ಬಳಕೆಯನ್ನು ಸ್ಥಗಿತಗೊಳಿಸಿದರೆ, ವಿದ್ಯುತ್​ ಗ್ರಿಡ್​ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಉಷ್ಣ ವಿದ್ಯುತ್​ ಸ್ಥಾವರಗಳು ಮತ್ತು ಜಲವಿದ್ಯುತ್​ ಸ್ಥಾವರಗಳಲ್ಲಿ ಟ್ರಿಪ್​ ಆಗಿ, ಟರ್ಬೈನ್​ಗಳಿಗೆ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಇವು ಒಮ್ಮೆ ಸ್ಥಗಿತಗೊಂಡರೆ, ಮತ್ತೆ ಕಾರ್ಯಾರಂಭಿಸುವಂತೆ ಮಾಡುವುದು ಸುಲಭದ ಕೆಲಸವಲ್ಲ. ಇದರಿಂದ ದಿನಗಟ್ಟಲೆ ವಿದ್ಯುತ್​ ಇಲ್ಲದೆ ಇರಬೇಕಾದ ಪರಿಸ್ಥಿತಿ ಉಂಟಾಗುವ ಸಂಭವವಿರುತ್ತದೆ ಎಂದು ಎಚ್ಚರಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ವಿದ್ಯುತ್​ ಸರಬರಾಜಿನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಟಿವಿ, ಫ್ರಿಜ್​, ಎಸಿ, ಫ್ಯಾನ್​, ಟಿವಿ, ಕಂಪ್ಯೂಟರ್​ ಮತ್ತಿತರ ವಿದ್ಯುತ್​ ಸಾಧನಗಳ ಬಳಕೆಯನ್ನು ಎಂದಿನಂತೆ ಮುಂದುವರಿಸಬೇಕು. ಹಾಗೂ ದೀಪಗಳನ್ನು ಮಾತ್ರ ಆರಿಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ವಕ್ತಾರರು ಸಲಹೆ ನೀಡಿದ್ದಾರೆ.

    ಅಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಲು ಬೀದಿದೀಪಗಳನ್ನು ಆರಿಸದಂತೆ ಸ್ಥಳೀಯ ಆಡಳಿತ ಮಂಡಳಿಗಳಿಗೆ ಕೇಂದ್ರ ಇಂಧನ ಸಚಿವಾಲಯ ಸೂಚನೆ ನೀಡಿದೆ.

    ಕರೊನಾ ತಡಗೆ ಏಪ್ರಿಲ್ 5ರ ಸಂಕಲ್ಪ ಏನು- ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ ನೋಡಿ…

    ದೀಪ ಬೆಳಗಲು ಮೋದಿ ಕರೆ ಕೊಟ್ಟಿದ್ದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟಿದ್ದಾರೆ ಕೆ.ಕೆ. ಅಗರ್‌ವಾಲ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts