ಜಿಲ್ಲೆ

ಶಿಕ್ಷಕರಿಗೆ ಏಪ್ರಿಲ್​ 14ರವರೆಗೆ ಮಾತ್ರ ರಜೆ; ಮೇ 20ರವರೆಗೆ ಅಲ್ಲ: ಕಾಲೇಜು ಶಿಕ್ಷಣ ಆಯುಕ್ತರು

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಿಗೆ ಮೇ 20ರವರೆಗೆ ರಜೆ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆ ಸುಳ್ಳು (ಫೇಕ್​) ಎಂದು ಕಾಲೇಜು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ರಜೆಯನ್ನು ಮಾರ್ಚ್​ 31ರಿಂದ ಏಪ್ರಿಲ್​ 14ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿರುವುದು ನಿಜ. ಮೇ 20ರವರೆಗೆ ಒಟ್ಟು 50 ದಿನ ರಜೆ ಘೋಷಿಸಲಾಗಿದೆ ಎಂಬ ಸುತ್ತೋಲೆ ಸುಳ್ಳು ಎಂದು ಕಾಲೇಜು ಶಿಕ್ಷಣ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಸುಳ್ಳು ಸುತ್ತೋಲೆಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದಾರೆ.