ಜಿಲ್ಲೆ

ಕರೊನಾ ಟಫ್ ರೂಲ್ಸ್ ಉಪಚುನಾವಣೆಗೆ ಅಪ್ಲೈ ಆಗಲ್ಲ!

ತುಮಕೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಕರೊನಾ ಎರಡನೇ ಅಲೆಯ ಆತಂಕ ಸಾರ್ವಜನಿಕರನ್ನು ದಟ್ಟವಾಗಿ ಕಾಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಬೆಳಗಾವಿ ಲೋಕಸಭೆ ಹಾಗೂ ಬಸವ ಕಲ್ಯಾಣ, ಮಸ್ಕಿ ವಿಧಾನಸಣಾ ಕ್ಷೇತ್ರಗಳಿಗೆ ಏಪ್ರಿಲ್​ನಲ್ಲಿ ಉಪಚುನಾವಣೆ ನಡೆಯಲಿದ್ದು, ಮೂರು ಪಕ್ಷದ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮನೆಮನೆಗೆ ಭೇಟಿ ನೀಡುವಲ್ಲಿ, ಸಭೆ ನಡೆಸುವಲ್ಲಿ ಬಿಜಿಯಾಗಿದ್ದಾರೆ.

ಈ ನಡುವೆ ತಿಪಟೂರಿಗೆ ಕಾರ್ಯಕ್ರಮ ನಿಮಿತ್ತ ಇಂದು ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅವರನ್ನ 'ಕರೊನಾ ಹೆಚ್ಚಾಗ್ತಿದೆ, ಉಪಚುನಾವಣೆ ಬೇರೆ ಇದೆ. ಇದಕ್ಕೂ ಟಫ್​ ರೂಲ್ಸ್​ ಅಪ್ಲೈ ಆಗುತ್ತಾ? ಎಂದು ಸುದ್ದಿಗಾರರು ಕೇಳಿದರು. ಇದಕ್ಕುತ್ತರಿಸಿದ ಸಿಎಂ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಕ್ಕೆ ಷರತ್ತು ಹಾಕಿದ್ದೇವೆ. ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ ಎಂದರು. ಇದನ್ನೂ ಓದಿರಿ ಆರ್​​ಎಸ್​ಎಸ್​ ನೂತನ ಸರಕಾರ್ಯವಾಹ ಆಗಿ ಆಯ್ಕೆಯಾದ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ

ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ. ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡಬಹುದು. ಶಾಲಾ ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ. ಒಂದು ವಾರ ನೋಡ್ತೀವಿ. ಕೋವಿಡ್ ಸಂಖ್ಯೆ ಜಾಸ್ತಿ ಆಗ್ತಿದ್ರೆ ಪರಿಸ್ಥಿತಿ ನೋಡಿ ತೀರ್ಮಾನ ತಗೋತೀವಿ ಎಂದು ಯಡಿಯೂರಪ್ಪ ಹೇಳಿದರು.

ಸಿಎಂರ ಈ ಹೇಳಿಕೆ ಪರೋಕ್ಷವಾಗಿ ಉಪಚುನಾವಣೆಗೆ ಕರೊನಾ ಟಫ್​ ರೂಲ್ಸ್​ ಅಪ್ಲೈ ಆಗಲ್ಲ ಎಂದು ಹೇಳಿದಂತೆ. ರಾಜಕೀಯಕ್ಕೆ ಒಂದು ರೂಲ್ಸ್​, ಸಾಮಾನ್ಯ ಜನರಿಗೊಂದು ರೂಲ್ಸ್​ ಏಕೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.