ಜಿಲ್ಲೆ

ಹಾಸನ ಪೊಲೀಸರಲ್ಲಿ ಭೀತಿ ಹುಟ್ಟಿಸಿದ ಕರೊನಾ! ಎಲ್ಲ ಸಿಬ್ಬಂದಿಗೂ ಪರೀಕ್ಷೆ ಕಡ್ಡಾಯಗೊಳಿಸಿದ ಎಸ್ಪಿ

ಹಾಸನ: ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಪೊಲೀಸ್ ಅಧಿಕಾರಿಗಳು ಕರೊನಾಗೆ ಬಲಿಯಾಗಿರುವುದು ಆರಕ್ಷಕ ಇಲಾಖೆಯಲ್ಲಿ ಕಂಪನ ಸೃಷ್ಟಿಸಿದ್ದು ಬುಧವಾರ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕೋವಿಡ್-19 ಪರೀಕ್ಷೆಗೆ ಒಳಪಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸೂಚಿಸಿದ್ದಾರೆ.

2019ರ ಮಾರ್ಚ್‌ನಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ವಿಸ್ತರಿಸಿದ್ದ ಕರೊನಾ ಇತ್ತೀಚೆಗೆ ಕ್ಷೀಣಿಸಿದೆ. ಪೊಲೀಸ್ ಇಲಾಖೆಯ ಅನೇಕ ನೌಕರರು ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರು. ಆದರೆ ಗೊರೂರು ಎಸ್‌ಐಐ ದೊರೆಸ್ವಾಮಿ, ಬಡಾವಣೆ ಠಾಣೆಯ ಬಾಲಕೃಷ್ಣ ಮೃತಪಟ್ಟಿರುವುದು ಕರ್ತವ್ಯ ನಿರತ ಪೊಲೀಸರಲ್ಲಿ ಭಯ ಹುಟ್ಟಿಸಿದೆ.

ಎಎಸ್‌ಐಗಳು ತಡವಾಗಿ ಆಸ್ಪತ್ರೆಗೆ ಸೇರಿರುವುದರಿಂದ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಠಾಣೆಯ ಸಿಬ್ಬಂದಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರ, ಕೆಮ್ಮು, ಶೀತ, ನೆಗಡಿಯಂತಹ ಸಾಮಾನ್ಯ ರೋಗ ಲಕ್ಷಣಗಳಿರುವವರು, ರಜೆಯಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಎಸ್ಪಿ ನಿರ್ದೇಶನ ನೀಡಿದ್ದಾರೆ.