ತಾವರಗೇರಾ ಸಮೀಪದ ಸಂಗನಾಳದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಅಧ್ಯಕ್ಷ ಸೋಮಪ್ಪ, ನಿರ್ದೇಶಕರಾದ ಸಗರಪ್ಪ, ರಮೇಶ ಕೋಡಿಹಾಳ, ಗಣೇಶಪ್ಪ, ಮರಿಸ್ವಾಮಿ, ನಡುಗಡ್ಡೆಪ್ಪ, ಸೋಮಪ್ಪ ಕಂಬಳಿ ಇತರರಿದ್ದರು. 
ಜಿಲ್ಲೆ

ಸಹಕಾರ ಸಂಘ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

Kopala - Desk - Eraveni

ತಾವರಗೇರಾ: ಸಮೀಪದ ಸಂಗನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.

ಮೆಣೆಧಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆ ಇದಾಗಿದ್ದು, 22ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಮೆಣೆಧಾಳ ಸಂಘದಲ್ಲಿ 2,222 ಜನ ಶೇರುದಾರರಿದ್ದು, ಪ್ರಸಕ್ತ ವರ್ಷ ಸಂಘದ ಸದಸ್ಯರ ಡಿವಿಡೆಂಟ್ ಹಣ 15ಲಕ್ಷ ರೂ., ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ 7ಲಕ್ಷ ರೂ. ಸಾಲ ಪಡೆಯಲಾಗಿದೆ.

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ, ಡಿವಿಡೆಂಟ್ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸೋಮಪ್ಪ ಮುಳ್ಳೂರ ಹಾಗೂ ಕಾರ್ಯದರ್ಶಿ ರಮೇಶ ಕೋಡಿಹಾಳ ತಿಳಿಸಿದರು. ಮೆಣೆಧಾಳ ಸಂಘದ ಉಪಾಧ್ಯಕ್ಷ ಸಗರಪ್ಪ ಮೂಲಿ, ನಿರ್ದೇಶಕರಾದ ಗಣೇಶಪ್ಪ ಅಂಗಡಿ, ಮರಿಸ್ವಾಮಿ ಪೂಜಾರಿ, ಸೋಮಪ್ಪ ಕಂಬಳಿ, ನಡುಗಡ್ಡೆಪ್ಪ ಸಿಂಗನಾಳ ಇತರರಿದ್ದರು.